ಬೆಳ್ತಂಗಡಿ, ನ 24 (DaijiworldNews/SM): ಇಲ್ಲಿನ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಆಂಬ್ಯುಲೆನ್ಸ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಗುರುವಾರ ರಾತ್ರಿ ಈ ಘಟನೆ ವರದಿಯಾಗಿದೆ.
ಅಪಘಾತದಿಂದಾಗಿ ಸರಿಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಂ ಉಂಟಾಗಿದೆ. ಸಂಜೆಯ ವೇಳೆ ಘಟನಾ ಸ್ಥಳದ ಅನತಿ ದೂರದಲ್ಲಿ ಇನ್ನೊಂದು ಆಂಬುಲೆನ್ಸ್ ಹಾಗೂ ರಿಕ್ಷಾ ಪರಸ್ಪರ ಢಿಕ್ಕಿಯಾಗಿತ್ತು. ರಾತ್ರಿ ಇನ್ನೊಂದು ಆಂಬುಲೆನ್ಸ್ ಮತ್ತು ಲಾರಿ ಪರಸ್ಪರ ಢಿಕ್ಕಿಯಾಗಿದೆ.
ಪ್ರದೇಶದಲ್ಲಿ ಸಂಜೆ ಸುರಿದ ವಿಪರೀತ ಮಳೆಗೆ ರಸ್ತೆ ಜಾರುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.