ಕಾಸರಗೋಡು, ನ 24 (DaijiworldNews/SM): ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾದ ಯುವತಿಯಿಂದ ಸುಮಾರು ಏಳು ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮೂಲದ ಯುವಕ ನೋರ್ವನನ್ನು ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಬರೇಲಿಯ ಮುಹಮ್ಮದ್ ಶಾರಿಕ್(19) ಬಂಧಿತ ಯುವಕ. ಮಧೂರಿನ ಯುವತಿಯೋರ್ವಳು ಆರೋಪಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದಳು. ಆಕೆಯಿಂದ ಆರೋಪಿ ಸುಮಾರು ಏಳು ಲಕ್ಷದ ಐನೂರು ರೂ. ಪಡೆದುಕೊಂಡು ವಂಚಿಸಿದ್ದಾನೆ. ಬೆಲೆ ಬಾಳುವ ಗಿಫ್ಟ್ ನೀಡುವ ಆಮಿಷ ತೋರಿಸಿ ಹಲವು ಬಾರಿಯಾಗಿ ಈತ ವಂಚನೆ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ವಂಚನೆ ಬಗ್ಗೆ ಲಭಿಸಿದ್ದ ದೂರಿನಂತೆ ಉತ್ತರ ಪ್ರದೇಶ ದ ಬರೇಲಿಯ ಸಿಂಗ್ಹಾಯ್ ಮುರವಾನ್ ಎಂಬಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ. 2002 ರ ಸೆಪ್ಟಂಬರ್ ನಿಂದ ಇನ್ ಸ್ಟಾಗ್ರಾಂ ಮೂಲಕ ಮೂಲಕ ಪರಿಚಯವಾಗಿದ್ದು, ಬಳಿಕ ವಾಟ್ಸ್ ಆಫ್ ಮೂಲಕವೂ ಚಾಟ್ ನಡೆಸುತ್ತಿದ್ದನು. ಬೆಲೆ ಬಾಳುವ ಗಿಫ್ಟ್ ಸೇರಿದಂತೆ ಹಲವು ಆಮಿಷ ಗಳನ್ನು ನೀಡಿ ಈತ ಲಕ್ಷಾಂತರ ರೂ. ಪಡೆದು ವಂಚಿಸಿದ್ದನು.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ರವರ ನಿರ್ದೇಶನ ದಂತೆ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳಾದ ಕೆ. ಪ್ರೇಮ್ ಸದನ್, ಎ ಎಸ್ ಐ ಪ್ರೇಮ ರಾಜನ್ , ಸವಾದ್ ಅಶ್ರಫ್, ಹರಿ ಪ್ರಸಾದ್ ನೇತೃತ್ವದ ತಂಡ ಉತ್ತರ ಪ್ರದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ.