ಕಾರ್ಕಳ, ನ 24 (DaijiworldNews/SM): ಖ್ಯಾತ ಕೊಂಕಣಿ ಲೇಖಕ ಕೆವಿನ್ ಡಿ'ಮೆಲ್ಲೋ ಕಾರ್ಕಳ(53) ಅವರು ನವೆಂಬರ್ 24 ಗುರುವಾರ ಮಧ್ಯಾಹ್ನ ನಿಧನರಾದರು. ಕಾರ್ಕಳದ ರಾಮಸಮುದ್ರ ಬಳಿಯ ತಮ್ಮ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆವಿನ್ ಆಲ್ಕೋಹಾಲಿಕ್ ಅನೆಮಿಕ್ ಮಿಷನ್ನಲ್ಲಿ ಸಕ್ರಿಯರಾಗಿದ್ದರು. ಅನೇಕರನ್ನು ಮದ್ಯ ವ್ಯಸನ ಮುಕ್ತರಾಗಿಸುವಲ್ಲಿ ಯಶಸ್ವಿಯಾಗಿದ್ದರು,. ಇದಲ್ಲದೆ, ಉತ್ತಮ ಸಮಾಜ ಸೇವಕರಾಗಿ ಕಾರ್ಕಳ ಸುತ್ತಮುತ್ತ ಗುರಿತಿಸಿಕೊಂಡಿದ್ದರು. ಕೊಂಕಣಿಯಲ್ಲಿ ಸಣ್ಣಕಥೆಗೆ ಹೆಸರುವಾಸಿಯಾಗಿದ್ದ ಇವರು 1983ರಿಂದ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆಗೈದಿದ್ದರು. ಇನ್ನೂರಕ್ಕೂ ಹೆಚ್ಚು ಸಣ್ಣಕಥೆಗಳನ್ನು ಬರೆದಿರುವ ಇವರು, ನಾಲ್ಕು ಸಣ್ಣ ಕಾದಂಬರಿಗಳನ್ನು ಬರೆದಿದ್ದಾರೆ. ಚಂಡ ಆನಿ ಗರ್ಭ ಇವರ ಕಥಾ ಸಂಗ್ರಹವಾಗಿದೆ. ಮೃತರು ಗಾಂಧಿ ಮೈದಾನ ಕ್ರೈಸ್ಟ್ ಕಿಂಗ್ ಚರ್ಚ್ ಶಾಲಾ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821