ಸುಬ್ರಹ್ಮಣ್ಯ, ನ 24 (DaijiworldNews/MS): ಜಾತ್ರೆ - ಉತ್ಸವದಲ್ಲಿ ಹಿಂದೂಯೇತರ ಸಮುದಾಯದ ವರ್ತಕರಿಗೆ ನಿರ್ಬಂಧ ಹೇರುತ್ತಿರುವ ಪ್ರಕರಣಕ್ಕೆ ಮತ್ತೆ ಕೇಳಿಬಂದಿದ್ದು, ಪ್ರಸಿದ್ದ ನಾಗ ಕ್ಷೇತ್ರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಸಂದರ್ಭದಲ್ಲಿ ಹಿಂದೂವೇತರ ವರ್ತಕರು ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಿದ ಬ್ಯಾನರ್ ಕಾಣಿಸಿಕೊಂಡಿದೆ.
ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ.ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಸಂದರ್ಭದಲ್ಲಿ ಹಿಂದುವೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸುಬ್ರಹ್ಮಣ್ಯ ಠಾಣೆಗೆ ಹಿಂದೂ ಜಾಗರಣೆ ವೇದಿಕೆಯ ಸುಬ್ರಹ್ಮಣ್ಯ ಘಟಕದ ವತಿಯಿಂದ ದೂರು ನೀಡಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.೨೯ರಿಂದ ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.