ಕಡಬ, ನ 23(DaijiworldNews/MS):ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ಬಳಿ ನಡೆದಿದೆ.
ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು ಬೆಂಗಳೂರಿನ ದಾಸರಹಳ್ಳಿಯ ನಾಗರತ್ಮಮ್ಮ( 58) ಮೃತಪಟ್ಟವರು.
ನಾಗರತ್ಮಮ್ಮ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳ ಯಾತ್ರೆಗೆ ರೈಲು ಮೂಲಕ ಬಂದಿದ್ದರು. ನೆಟ್ಟಣದಲ್ಲಿ ಬಂದಿಳಿದ ಅವರು ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿದ್ದರು.ಬಸ್ ಮುಂಭಾಗ ಕುಳಿತಿದ್ದ ಅವರು ತಿರುವು ರಸ್ತೆಯಲ್ಲಿ ಬಸ್ ಚಲಿಸಿದ ಹಿನ್ನೆಲೆ ಬಸ್ ನ ಬಾಗಿಲು ಹಾಕದ ಕಾರಣ ಏಕಾಏಕಿ ಮಹಿಳೆ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕರ್ತವ್ಯದ ವೇಳೆ ಅಜಾಗರೂಕತೆ ವಹಿಸಿದ ಬಸ್ ಚಾಲಕ ಅಬ್ದುಲ್ ರಝಾಕ್ ಮತ್ತು ನಿರ್ವಾಹಕ ಗುರುನಾಥ ಅವರ ವಿರುದ್ದ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರ:
ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರ್ ಇ ಹಾಗೂ ಇತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿ ೨೫ ಸಾವಿರ ರೂ. ಮಧ್ಯಾಂತರ ಪರಿಹಾರ ಹಸ್ತಾಂತರಿಸಿದರು. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ವಿಮಾ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.