ಕಾಸರಗೋಡು, ನ 22 (DaijiworldNews/HR): ಬಸ್ಸು ಪ್ರಯಾಣಿಕನಿಂದ ಸುಮಾರು 18 ಲಕ್ಷ ರೂ. ಹವಾಲ ಹಣವನ್ನು ಮಂಜೇಶ್ವರ ಅಬಕಾರಿ ಸಿಬಂದಿಗಳು ವಶಸಿಡಿಸಿಕೊಂಡಿರುವ ಘಟನೆ ನಡೆದಿದೆ.
ಈ ಸಂಬಂಧ ಮಹಾರಾಷ್ಟ್ರ ಸೊಲ್ಲಾಪುರದ ನಿತಿನ್ (35) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಆರ್ಟಿಸಿ ಬಸ್ಸನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.
ಕಾಸರಗೋಡು ನಿವಾಸಿಗೆ ತಲಪಿಸಲು ಮಹಾರಾಷ್ಟ್ರ ನಿವಾಸಿಯೋರ್ವರು ಹಣ ನೀಡಿದ್ದಾಗಿ ಬಂಧಿತ ನಿತಿನ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಹೆಚ್ಚಿನ ತನಿಖೆ ಗಾಗಿ ಹಣ ಮತ್ತು ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದೆ.