ಉಳ್ಳಾಲ, ನ 21 (DaijiworldNews/DB): ಹರೇಕಳ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಜನರ ಅನುಕೂಲಕ್ಕೆ ಮಾಡಿರುವ ಸೇತುವೆಯನ್ನು ಆದಷ್ಟು ಬೇಗ ಜನರಿಗೆ ಉಪಯೋಗವಾಗುವಂತೆ ಮಾಡಬೇಕು. ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇಲ್ಲಿ ಜನರ ಅನುಕೂಲಕ್ಕೆ ಗೇಟ್ ತರೆಯುತ್ತಿದ್ದು ಅದನ್ನು ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ತರೆಯಬೇಕು. 15 ದಿನದಲ್ಲಿ ಈ ಸೇತುವೆಯನ್ನು ಜನಸಾಮಾನ್ಯರಿಗೆ ಮುಕ್ತ ಮಾಡಿಕೊಡದೇ ಇದ್ದಲ್ಲಿ ಅನಿರ್ದಿಷ್ಠ ಪ್ರತಿಭಟನೆ ನಡೆಸಲಾಗುವುದು ಎಂದರು.
ಉಳ್ಳಾಲ ಡಿವೈಎಫ್ ಐ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಹರೇಕಳ ಸಿಐಟಿಯು ರಿಕ್ಷಾ ಯೂನಿಯನ್ ಅಧ್ಯಕ್ಷ ಆಶೀಫ್ ಪಂಜಿಮಾಡಿ, ಹರೇಕಳ ಡಿವೈಎಫ್ಐ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಲಚ್ಚಿಲ್, ಸಿಪಿಐಎಂ ಹಿರಿಯ ಮುಖಂಡರಾದ ಉಮ್ಮರಬ್ಬ, ಸತ್ತಾಎ ಕೊಜಪಾಡಿ, ಎವ್ರೀಸ್, ಇಸ್ಮಾಯಿಲ್ ಆಲಡ್ಕ, ಕೆ.ಎಚ್. ಹಮೀದ್ ಉಪಸ್ಥಿತರಿದ್ದರು. ಗ್ರಾಮ ಸಮಿತಿ ಕಾರ್ಯದರ್ಶಿ ರಿಝ್ವಾನ್ ಕಂಡಿಗ ಸ್ವಾಗತಿಸಿದರು.