ಮಂಗಳೂರು, ನ. 20 (DaijiworldNews/SM): ನಗರದಲ್ಲಿ ಆಟೋ ರಿಕ್ಷಾದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದು ನಗರದ ಖಾಸಗಿ ಅಸ್ಪತ್ರೆಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಆರೋಪಿಗೆ ಚಿಕಿತ್ಸೆ ನಡೀತಾ ಇದೆ. ಆರೋಪಿಗೆ 45% ಗಾಯಗಳಿವೆ.
ಆರೋಪಿ ಮಾತನಾಡಲ್ಲ, ಆದರೆ ಪುರುಷೋತ್ತಮ್ ಮಾತನಾಡ್ತಾರೆ. ಆರೋಪಿ ಪಂಪ್ ವೆಲ್ ಅಂತ ಆಟೋ ಚಾಲಕನಿಗೆ ಹೇಳಿದ್ದಾನೆ.
ಆರೋಪಿ ಕುಟುಂಬಿಕರಿಗೆ ನಾವು ಕರೆದಿದ್ದೇವೆ, ನಾಳೆ ಬೆಳಿಗ್ಗೆ ಅವರು ಬರ್ತಾರೆ. ಆರೋಪಿಯ ಸಂಪರ್ಕ, ಯಾರೆಲ್ಲಾ ಅವನ ಜೊತೆ ಇದಾರೆ ಅಂತ ತನಿಖೆ ಮಾಡ್ತೇವೆ.
ರಾಜ್ಯದ ಹೊರಗೆ ಕೂಡ ಟೀಮ್ ಕಳಿಸಿ ತನಿಖೆ ಮಾಡ್ತೇವೆ. ಪರಮೇಶ್ವರ್ ಹೆಗ್ಡೆ ಈ ಪ್ರಕರಣದ ತನಿಖಾಧಿಕಾರಿ ಆಗಿದ್ದಾರೆ.
ಬಹಳಷ್ಟು ಸಾಕ್ಷ್ಯ ನಮ್ಮಲ್ಲಿ ಇದೆ, ನಾಳೆ ಇದಕ್ಕೆ ಒಂದು ಕ್ಲಾರಿಟಿ ಸಿಗುತ್ತೆ. ಗೋಡೆ ಬರಹದಲ್ಲಿ ಮಾಝ್ ಮುನೀರ್, ಅಬ್ದುಲ್ ಮತೀನ್ ಹಾಗೂ ಶಾರೀಕ್ ಇದ್ದಾರೆ. ನಾಳೆ ಬೆಳಿಗ್ಗೆ ಈ ಬಗ್ಗೆ ಸ್ಪಷ್ಟವಾಗಿ ಹೇಳ್ತೇವೆ ಎಂದು ಎಡಿಜಿಪಿ ಪ್ರತಿಕ್ರಿಯಿಸಿದ್ದಾರೆ.