ಮಂಗಳೂರು, ನ 20 (DaijiworldNews/MS): ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಸ್ಪಷ್ಟಪಡಿಸಿದ್ದಾರೆ.
ಇದರ ಬೆನ್ನಲ್ಲೇ ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕ ಮೇಲೆ ಹಲವು ಅನುಮಾನ ಕಾಡತೊಡಗಿದ್ದು, ಪ್ರಯಾಣಿಕನ ಸೋಗಿನಲ್ಲಿದ್ದ ಆ ವ್ಯಕ್ತಿ ಯಾರು, ಆತನ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪರಿಶೀಲನೆ ವೇಳೆ ಆಟೋದಲ್ಲಿ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ದಾಖಲೆಯಲ್ಲಿ ಮೈಸೂರಿನ ವಿಳಾದ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮೈಸೂರಿಗೆ ತೆರಳಿದೆ. ಅಲ್ಲದೆ ಪ್ರಯಾಣಿಕನ ಬಳಿ 30 ಸಾವಿರ ರೂ. ನಗದು ಪತ್ತೆಯಾಗಿದೆ.
ಆಟೋ ರಿಕ್ಷಾದಲ್ಲಿ ಪ್ರಯಾಣಿಕ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕ ೪.೩೦ರ ಸುಮಾರಿಗೆ ನಿಲ್ದಾಣದಿಂದ ಸ್ವಲ್ಪ ಮುಂದೆ ಆಟೋ ಹತ್ತಿದ್ದುಆತನ ಕೈಯಲಿ ಕುಕ್ಕರ್ ಇದ್ದ ಚೀಲವಿದ್ದು ಪಂಪ್ವೆಲ್ ಕಡೆ ಹೋಗುವಂತೆ ತಿಳಿಸಿದ್ದಾನೆ ಎನ್ನಲಾಗಿದೆ.
ವಿಚಾರಣೆ ವೇಳೆ ಮೈಸೂರಿನಿಂದ ಬಂದಿರುವುದುದಾಗಿ ಹೇಳಿಕೊಂಡಿದ್ದು, ಅಣ್ಣ ಬಾಬು ರಾವ್ ಗೆ ಕರೆ ಮಾಡಿ ಎಂದು ಸಹೋದರನ ಮೊಬೈಲ್ ಸಂಖ್ಯೆ ನೀಡಿದ್ದು ಅದಕ್ಕೆ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದಾತ " ಆತ ನನ್ನ ಸಂಬಂಧಿಕನಲ್ಲ, ಬಾಡಿಗೆ ರೂಂ ನಲ್ಲಿದ್ದ, ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದ. ಬೇರೇನು ಗೊತ್ತಿಲ್ಲ ಎಂಬುವುದಾಗಿ ತಿಳಿಸಿದ್ದಾನೆ. ಆಟೋದಲ್ಲಿದ್ದ ವ್ಯಕ್ತಿ ಹಿಂದಿ ಬಾಷೆಯಲ್ಲಿ ವ್ಯವಹರಿಸುತ್ತಿದ್ದ ಎಂದು ತಿಳಿದುಬಂದಿದೆ.