ಮಂಗಳೂರು, ಫೆ 24 (MSP): ಯುವ ಕಾಂಗ್ರೆಸ್ ನ ನಾಯಕ ಮಿಥುನ್ ರೈ, ಶರಣ್ಯ ಶೆಟ್ಟಿ ಅವರೊಂದಿಗೆ ಸಪ್ತಪದಿ ತುಳಿದು ಫೆ.24 ರ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀದುರ್ಗಾ ಪರಮೇಶ್ವರಿ ಕಟೀಲು ದೇವಸ್ಥಾನದಲ್ಲಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಮಿಥುನ್ ರೈ ಹಾಗೂ ಮಂಗಳೂರಿನ ಶರಣ್ಯ ಶೆಟ್ಟಿ ದಾಂಪತ್ಯ ಜೀವನ ಪ್ರವೇಶಿಸಿದರು. ವಿವಾಹ ಸಮಾರಂಭದಲ್ಲಿ ಎರಡು ಕುಟುಂಬದ ಹತ್ತಿರದ ಬಂಧುಗಳು ಭಾಗವಹಿಸಿದ್ದರು. ಇಂದು ಸಂಜೆ ನಗರದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಅದ್ದೂರಿ ಅರಕ್ಷತೆ ನಡೆಯಲಿದ್ದು ಪಕ್ಷದ ಮುಖಂಡರು, ಮಿಥುನ್ ರೈ ಅವರ ಬೆಂಬಲಿಗರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಮಿಥುನ್ ರೈಅವರ ಕೈ ಹಿಡಿದ ಶರಣ್ಯ ಶೆಟ್ಟಿ ಎಂಕಾಂ ಪದವೀಧರೆ ಯಾಗಿದ್ದು ಮಧ್ಯಮ ಕುಟುಂಬದ ಹೆಣ್ಣುಮಗಳು. ಮಿಥುನ್ ರೈಗೆ ಅನೇಕ ಅಗರ್ಭ ಶ್ರೀಮಂತ ಮನೆತನದ ಸಂಬಂಧಗಳು ಬಂದಿದ್ದವು. ಆದರೆ ತನಗೆ ಒಪ್ಪುವ ಸುಶಿಕ್ಷಿತ ಹುಡುಗಿಯನ್ನೇ ವರಿಸಲು ನಿರ್ಧರಿಸಿ ಶರಣ್ಯ ಅವರೊಂದಿಗೆ ಕಳೆದ ಸೆಪ್ಟೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.