ಕಾರ್ಕಳ, ನ 19 (DaijiworldNews/MS): ಗರ್ಭಿಣಿ ಮಹಿಳೆಯೋರ್ವರು ಹೆರಿಗೆಗೆಂದು ಕಾರ್ಕಳ ತಾಲೂಕಿನ ಕಲ್ಯಾದಿಂದ ಆಂಬುಲೆನ್ಸ್ ನಲ್ಲಿ ಕಾರ್ಕಳ ತಾಲೂಕು ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯೆ ಆಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವ ವೇಳೆ 11 ಗಂಟೆ ವೇಳೆಗೆ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ನೀಲಮ್ಮ ಮತ್ತು ಮತ್ತು ಮಗು ಆರೋಗ್ಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪುಂಡಲೀಕ, ಇ.ಎಂ.ಟಿ. ರಾಜಶೇಖರ್ ಎಸ್.ಕೆ ಹೆರಿಗೆಗೆ ಸಹಕರಿಸಿದ್ದರು.