ಸುಳ್ಯ, ನ 19 (DaijiworldNews/HR): ಅನಾರೋಗ್ಯದಿಂದಾಗಿ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಬೆಳ್ಳಾರೆಯ ಐವತ್ತೊಕ್ಲು ಗ್ರಾಮದ ಪಡ್ಪಿನಂಗಡಿ ಸಮೀಪದ ಜನತಾ ಕಾಲೋನಿಯಲ್ಲಿ ನಡೆದಿದೆ.
ಉಮೇಶ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಸುಪ್ರೀತಾ (19) ಮೃತ ಯುವತಿ.
ಸುಪ್ರೀತಾ ನಿಂತಿಕಲ್ಲುವಿನಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು, ನ.14 ರಂದು ಮನೆಯಲ್ಲಿದ್ದ ವೇಳೆ ಹಠಾತ್ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಮೊದಲು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಯುವತಿಯ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ನ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.