ಬಂಟ್ವಾಳ, ನ 18 (DaijiworldNews/MS): ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಹಾನ್ ತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.
ತುಂಬೆ ರಾಮ ನಿವಾಸಿಯೇ ಆರೋಪಿಯಾಗಿದ್ದಾನೆ.
ಆರೋಪಿ ತುಂಬೆಯಲ್ಲಿ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಗೆ್ ಈತ ಮಲತಂದೆಯಾಗಿದ್ದು, ಬಾಲಕಿಯ ತಂದೆ ಅಪಘಾತದಲ್ಲಿ ಮರಣಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿಯೂ ಇವರ ಜೊತೆಯಲ್ಲಿ ವಾಸವಾಗಿದ್ದಳು.
ಅಪ್ರಾಪ್ತ ಬಾಲಕಿಯನ್ನು ಹಿಂಸಿಸಿ ದೌರ್ಜನ್ಯವೆಸಗುತ್ತಿದ್ದು ಪರಿಣಾಮ ಬಾಲಕಿ 4 ತಿಂಗಳ ಗರ್ಬಿಣಿಯಾಗಿದ್ದು ಬಾಲಕಿಯ ತಂದೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ.