ಸುಬ್ರಹ್ಮಣ್ಯ, ನ 16 (DaijiworldNews/DB): ನದಿ ನೀರಲ್ಲಿ ಮುಳುಗಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ಯೇನೆಕಲ್ಲಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಧರ್ಮಪಾಲ ಪರಮಲೆ (46) ಹಾಗೂ ಬೆಳ್ಯಪ್ಪ ಚಳ್ಳಂಗಾರು ಚೊಕ್ಕಾಡಿ (49) ಮೃತಪಟ್ಟವರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ನ ಕಸ ವಿಲೇವಾರಿ ಘಟಕದಲ್ಲಿ ಧರ್ಮಪಾಲ ಅವರು ದಿನಗೂಲಿ ನೌಕರರಾಗಿದ್ದರು. ನಿನ್ನೆ ರಾತ್ರಿ ಹೊಳೆಯಲ್ಲಿದ್ದ ಪಂಪ್ನ ಫೂಟ್ ವಾಲ್ ಹೊರ ತೆಗೆಯಲೆಂದು ಇಬ್ಬರು ನೀರಿಗಿಳಿದಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ದ್ದು ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ.
ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ನೀರಿನಿಂದ ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೆ ನಡೆಯಬೇಕಿದೆ.