ಉಳ್ಳಾಲ, ನ 16 (DaijiworldNews/MS): ತಲಪಾಡಿ ಅಂಗನವಾಡಿ ಕಟ್ಟಡ ಅಪಾಯದಲ್ಲಿರುವ ಕುರಿತು ದಾಯ್ಜಿವಲ್ಡ್೯ 247 ನಲ್ಲಿ ಸುದ್ಧಿ ಪ್ರಕಟವಾಗುತ್ತಿದ್ದಂತೆ ತಲಪಾಡಿ ಪ್ರದೇಶಕ್ಕೆ ತಾ.ಪಂ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ವಿಶ್ವನಾಥ್ ಕುಲಾಲ್ ಭೇಟಿ ನೀಡಿ ತಕ್ಷಣ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ.
ಅಂಗನವಾಡಿಗೆ ನೀರಿನ ಸೌಲಭ್ಯದಲ್ಲಿ ಯಾಕಿಲ್ಲ ಅಂದರೆ ಬೋರ್ವೆಲ್ ಮಾಡಿದ್ರೆ ಉಪ್ಪು ನೀರು ಸಿಗುತ್ತದೆ. ಪಕ್ಕದ ಮನೆಯ ರಾಮ್ ಮನೋಹರ ರೈ ತಲಪಾಡಿ ದೊಡ್ಡಮನೆ ಅಲ್ಲಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಅಲ್ಲಿ ಎಲ್ಲರ ಮನೆಗಳಲ್ಲಿ ಬಾವಿ ಇರುವುದರಿಂದ ಜನವರಿ ನಂತರ ಹೊರಗಿನಿಂದ ನೀರು ಸರಬರಾಜು ಮಾಡುವುದು. ಆದರೆ ಪ್ರಸ್ತುತ ಅಲ್ಲೇ ಪಕ್ಕದಲ್ಲಿ ಎಲ್ಲಿ ನೀರು ಸಿಗುತ್ತದೆ ನರೇಗಾ ವತಿಯಿಂದ ಅಲ್ಲಿ ಒಂದು ಬಾವಿ ಮಾಡಿ, ಅಲ್ಲಿರುವಂಥ ಪಶು ಚಿಕಿತ್ಸಾಲಯ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡ ಮತ್ತು ಅಂಗನವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಅಂಗನವಾಡಿ ಮತ್ತು ವಾಣಿಜ್ಯ ಕಟ್ಟಡದ ಹಿಂಬದಿ ಸುಮಾರು 20 ಮೀಟರ್ ಎತ್ತರ ದ ಗುಡ್ಡವಿದ್ದು ಸಾರ್ವಜನಿಕ ಸ್ಮಶಾನ ಭೂಮಿ ಇದೆ ಪಿಡಿಓ ರವರು ಹೇಳಿರುವಂತೆ ಮತ್ತು ಹಾಜರಿದ್ದ ಸಾರ್ವಜನಿಕರು ಹೇಳುವಂತೆ ಪ್ರತಿ ಮಳೆಗಾಲದಲ್ಲೂ ಈ ಗುಡ್ಡದ ಬದಿಯು ಕುಸಿಯುತ್ತಿದ್ದು ಅಪಾಯವಾಗುವ ಸಂಭವಿದೆ ಪ್ರಸ್ತುತ ಅಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ಮಣ್ಣಿನ ರಾಶಿ ಇದ್ದು ಪಂಚಾಯತ್ ರಾಜ್ ಅಭಿಯಂತರರು ಅದನ್ನು ತೆರವುಗೊಳಿಸಿದರೆ ಇನ್ನಷ್ಟು ಗುಡ್ಡ ಕುಸಿಯುವ ಸಂಭವವಿದೆ.
ಆದುದರಿಂದ ಮಳೆಗಾಲ ಮುಗಿದ ನಂತರ ಅದನ್ನು ತೆರವುಗೊಳಿಸಿ ಎಂದು ಸೂಚಿಸಿರುತ್ತಾರೆ ಎಂದು ಪಿಡಿಒ ಹೇಳಿಕೆ ನೀಡಿದರು.ಪ್ರಸ್ತುತ ಮಳೆಗಾಲ ಮುಗಿದಿರುವುದರಿಂದ ಕಟ್ಟಡದ ಸುತ್ತಲಿನ ಸೆಟ್ ಬ್ಯಾಕ್ ಪ್ರದೇಶದ ಗಿಡಗಂಟಿಗಳನ್ನು ಮತ್ತು ಮಣ್ಣನ್ನು ತೆರವುಗೊಳಿಸಲು ಸೂಚಿಸಿರುವುದಾಗಿ ಅಧಿಕಾರಿ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭ ತಲಪಾಡಿ ಪಿಡಿಓ ಕೇಶವ್ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ: ಅಪಾಯದಲ್ಲಿ ಅಂಗನವಾಡಿ ಮಕ್ಕಳು - ಅವ್ಯವಸ್ಥೆ ಆಗರ ತಲಪಾಡಿ ಗ್ರಾಮಸೌಧ