ಕಾಸರಗೋಡು, ನ 15 (DaijiworldNews/HR): ಹಿರಿಯ ಕಾಂಗ್ರೆಸ್ ನಾಯಕ ನ್ಯಾಯವಾದಿ ಸಿ.ಕೆ ಶ್ರೀಧರನ್ ಕಾಂಗ್ರೆಸ್ ಪಕ್ಷ ತ್ಯಜಿಸಲು ತೀರ್ಮಾನಿಸಿದ್ದು, ಶೀಘ್ರ ಸಿಪಿಐಎಂಗೆ ಸೇರ್ಪಡೆಗೊಳ್ಳಲಿದ್ದಾರೆ.
ರಾಜ್ಯ ನಾಯಕತ್ವದ ಧೋರಣೆ ಪ್ರತಿಭಟಿಸಿ ಪಕ್ಷ ತ್ಯಜಿಸಲು ತೀರ್ಮಾ ನಿಸಿ ರುವುದಾಗಿ ಶ್ರೀಧರನ್ ಸ್ಪಷ್ಟ ಪಡಿಸಿದ್ದು, ಡಿ. 19 ರಂದು ಹೊಸದುರ್ಗದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಿಪಿಐಎಂಗೆ ಸೇರ್ಪಡೆಗೊಳ್ಳಲಿದ್ದಾರೆ.
ಉದುಮ, ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಿಂದ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಪಕ್ಷದ ನಿಲುವನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷ ವನ್ನು ತೊರೆಯಲು ತೀರ್ಮಾನಿಸಿದ್ದಾರೆ.