ಕಾರ್ಕಳ, ನ 15 (DaijiworldNews/HR): ಪಡುತಿರುಪತಿ ಖ್ಯಾತಿಯ ವೆಂಕಟರಮಣ ಶ್ರೀ ಕ್ಷೇತ್ರದಲ್ಲಿ ಜರುಗಿದ್ದ ದೀಪೋತ್ಸದ ಪ್ರಯುಕ್ತ ಅವಭ್ರತ ಮೆರವಣಿ ಮಂಗಳವಾರ ಸಂಜೆ ಶ್ರೀ ಕ್ಷೇತ್ರದಿಂದ ಆರಂಭಗೊಂಡಿತು.
ಮುಖ್ಯರಸ್ತೆಯಾಗಿ ಸಾಗಿ ಬಂದು ಐತಿಹಾಸಿಕ ರಾಮಸಮುದ್ರದಲ್ಲಿ ದೇವರ ವಿಗ್ರಹಗಳಿಗೆ ಅಭಿಷೇಕ ಸ್ನಾನವು ಆರ್ಚಕ ವರ್ಗದವರಿಂದ ನಡೆಯಿತು.
ಭಕ್ತಾದಿಗಳು ಅದೇ ರಾಮಸಮುದ್ರದಲ್ಲಿ ಸ್ನಾನಗೈದು ಪುನೀತರಾದರು. ಅಲ್ಲಿಂದ ಹೊರಟ ಅವಭ್ರತ ಮೆರವಣಿಗೆ ಸಂದರ್ಭದಲ್ಲಿ ಭಕ್ತಾದಿಗಳು ರಸ್ತೆಯ ಇಕ್ಕೆಲೆಗಳಲ್ಲಿ ನೆರೆದು ಪ್ರಾರ್ಥನೆಸೇವೆಗೈದರು. ತಡರಾತ್ರಿ ಮೆರವಣಿಗೆ ಶ್ರೀ ತಲುಪಿತು.