ಮಂಗಳೂರು, ಫೆ 22(MSP): ಕಡಲನಗರಿ ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್ ಅವರು ಫೆ.22 ರ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ವರ್ಗಾವಣೆ ಹಿನ್ನೆಲೆ ಇಂದು ಸಂಜೆ ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಆಯುಕ್ತ ಟಿ.ಆರ್.ಸುರೇಶ್ ಅವರು ಅಧಿಕಾರ ಹಸ್ತಾಂತರಿಸಿದರು.
ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಸಂದೀಪ್ ಪಾಟೀಲ್ ಅವರು, ಈ ಹುದ್ದೆಯು ಜವಬ್ದಾರಿಯುತ ಹುದ್ದೆಯಾಗಿದ್ದು ಈ ಹಿಂದಿನ ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿಭಾಯಿಸಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಉತ್ಸುಕನಾಗಿದ್ದೇನೆ. ಶಾಂತಿ ಕಾಪಾಡಲು, ಅಪರಾಧ ನಿಯಂತ್ರಣ, ಗಾಂಜಾ ಮಾಫಿಯಾ ಕಡಿವಾಣ, ಟ್ರಾಫಿಕ್ ಸಮಸ್ಯೆ ಪರಿಹಾರ, ಮಹಿಳೆಯರ ಸುರಕ್ಷತೆಯ ಜತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಅಡೆತಡೆಗಳಿಲ್ಲದೆ ಶಾಂತಿಯುತವಾಗಿ ಸಾಗಲು ಕ್ರಮ ಕೈಗೊಳ್ಳವ ಜವಬ್ದಾರಿ ಇದೆ. ಎಲ್ಲವನ್ನು ಸಿದ್ದತೆ ನಡೆಸಿ ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.
ಸಂದೀಪ್ ಪಾಟೀಲ್ ಅವರು ಇದಕ್ಕೂ ಮೊದಲು ಡಿಐಜಿ ಮತ್ತು ಬೆಂಗಳೂರು ಸಿಎಆರ್ ಯುನಿಟ್ಸ್ನ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಬೀದರ್ ಮೂಲದ ಸಂದೀಪ್ ಪಾಟೀಲ್ ಅವರು 2004ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ.