ಮಂಗಳೂರು, ನ 14 (DaijiworldNews/MS):ನಗರದ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ರಾತ್ರಿ ದಕ್ಕೆಯ ಮಂಜಿ ನಿಲುಗಡೆ ಸ್ಥಳದಲ್ಲಿ ಬಲೆ ಸಂಗ್ರಹಾಗಾರಕ್ಕೆ ಬೆಂಕಿ ಬಿದ್ದು , ಲಕ್ಷಾಂತರ ಮೌಲ್ಯದ ಮೀನು ಹಿಡಿಯುವ ಬಲೆಗಳು ಸುಟ್ಟು ಭಸ್ಮವಾಗಿವೆ.ಘಟನೆಯಲ್ಲಿ ಯಾವುದೇ ಪ್ರಾಣಾಪ್ರಾಯ ಸಂಭವಿಸಿಲ್ಲ.
ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ನಡೆದಿದೆ.
ಬಲೆಗಳ ರಾಶಿಗೆ ಹೇಗೆ ಬೆಂಕಿ ಬಿತ್ತು ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ. ಅಕ್ಟೋಬರ್ 28 ರಂದು, ಮೀನುಗಾರಿಕಾ ಬಂದರಿನಲ್ಲಿ ಮೂರು ಸರಕು ದೋಣಿ ಬೆಂಕಿ ಅವಘಡದಿಂದ ಸುಟ್ಟುಕರಕಲಾಗಿತ್ತು. ಎರಡು ವಾರಗಳ ಅಂತರದಲ್ಲಿ ಎರಡನೆಯ ಬೆಂಕಿ ಅವಘಡ ಇದಾಗಿದೆ. ಇದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ