ಕಾರ್ಕಳ, ಫೆ 22(MSP): ಅಮಲು ಪದಾರ್ಥ ಸೇವೆನೆಗೈದ ಪತಿರಾಯನೊಬ್ಬ ತಡರಾತ್ರಿ ಮನೆಯ ಬಾಗಿಲು ಮುರಿದು ಮನೆಯೊಳಗಿದ್ದ ಪತ್ನಿಗೆ ಕಬ್ಬಿಣದ ರಾಡ್ನಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಾರ್ಕಳದ ಗುಂಡ್ಯಡ್ಕ ಎಂಬಲ್ಲಿ ಫೆ.21 ರ ಗುರುವಾರ ರಾತ್ರಿ ನಡೆದಿದೆ.
ಆರೋಪಿ ದಾವೂದ್ ಮೂಲತ ಹುಬ್ಬಳ್ಳಿಯವನಾಗಿದ್ದು, ಪ್ರಸಕ್ತ ನಗರದ ಖಾಸಗಿ ಸಂಸ್ಥೆಯೊಂದರ ಬಸ್ ಚಾಲಕನಾಗಿ ದುಡಿಯುತ್ತಿದ್ದಾನೆ. ತಡ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಮನೆಯ ಬಾಗಿಲು ಬಡಿದು ಬೊಬ್ಬೆ ಹಾಕುತ್ತಿದ್ದ ದಾವೂದ್ ಕೆಲವೇ ಹೊತ್ತಿನಲ್ಲಿ ಮನೆಯ ಹೆಬ್ಬಾಗಿಲನ್ನು ಮುರಿದು ಹಾಕಿದ್ದಾನೆ. ಮನೆ ಬಾಗಿಲು ತೆರೆಯಲಿಲ್ಲ ಯಾಕೆ ಎಂದು ಪ್ರಶ್ನಿಸಿ ಏಕಾಏಕಿ ಕೈಯಲ್ಲಿ ಇದ್ದ ರಾಡ್ನಿಂದ ಪತ್ನಿಯ ಮೇಲೆರಗಿ ತೀವ್ರ ಹಲ್ಲೆ ನಡೆಸಿದ್ದಾನೆ. ಗಾಯಾಳು ಪತ್ನಿ ಮಮ್ತಾಜ್, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
20014ರಲ್ಲಿ ದಾವೂದ್ ಮತ್ತು ಮಮ್ತಾಜ್ ಇವರಿಗೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿ ಅಗಿಂದಾಗೆ ಜಗಳ ಏರ್ಪಡುತ್ತಿತ್ತು ಎಂಬ ಮಾಹಿತಿ ಲಭಿಸಿದೆ. ಅದರ ಮೂಂದುವರಿದ ಭಾಗವಾಗಿ ಮಾರಾಣಾಂತಿಕ ಹಲ್ಲೆ ನಡೆದಿದೆ. ಘಟನೆ ನಡೆದ ಕೆಲವೇ ಹೊತ್ತಿನೊಳಗಾಗಿ ಆರೋಪಿ ದಾವೂದ್ನನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.