ಉಡುಪಿ, ನ 13 (DaijiworldNews/HR): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ನವಂಬರ್ 12ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 34,320 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -29, ಚೆಕ್ಕು ಅಮಾನ್ಯ ಪ್ರಕರಣ-268, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-21, ಎಂ.ವಿ.ಸಿ ಪ್ರಕರಣ-86, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-1, ಎಂ.ಎಂಆರ್.ಡಿ ಆಕ್ಟ್ ಪ್ರಕರಣ-15, ವೈವಾಹಿಕ ಪ್ರಕರಣ-1, ಸಿವಿಲ್ ಪ್ರಕರಣ-174, ಇತರೇ ಕ್ರಿಮಿನಲ್ ಪ್ರಕರಣ-2538 ಹಾಗೂ ವ್ಯಾಜ್ಯ ಪೂರ್ವ ದಾವೆ-31187) ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.12,34,77,966/- ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
4ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದಿದ್ದ O.S. 805/22 – Declaration Suit O.S. 180/2018 – Declaration & Partitionಎರಡೂ ದಾವೆಗಳನ್ನು ಈ ದಿನದ ಲೋಕ್ ಅದಾಲತ್ ಕಲಾಪದಲ್ಲಿ ಟೀನಾ ಪಿಂಟೋ ತನ್ನ ತಾಯಿ ಮತ್ತು ಸಹೋದರ ಮತ್ತು ಸಹೋದರಿ ಭೌತಿಕವಾಗಿ ಹಾಜರಾಗಿ ರಾಜಿ ಪತ್ರ ಸಲ್ಲಿಸಿ, ದಾವೆಯನ್ನು ರಾಜಿ ಮಾಡಿಕೊಂಡಿರುತ್ತಾರೆ. ದುಬೈನಲ್ಲಿರುವ ಸಹೋದರಿ ವಿರ್ಚುವಲ್ ಮೋಡ್ ನಲ್ಲಿ ಹಾಜರಾಗಿ ರಾಜಿ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಹಾಗಾಗಿ ಒಂದೇ ಕುಟುಂಬದ ಎರಡು ದಾವೆಗಳು ಈ ದಿನದ ಲೋಕ ಅದಾಲತ್ನಲ್ಲಿ ಸುಖಾಂತ್ಯ ಕಂಡಿದೆ.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ನ್ನು ಯಶಸ್ವಿಗೊಳಿಸಲಾಯಿತು.