ಬಂಟ್ವಾಳ, ನ 13 (DaijiworldNews/DB): ಸುರಿಬೈಲುವಿನ ಯುವಕನನ್ನು ಕೊಲೆಗೈದು ಸುಟ್ಟು ಹೊಂಡಕ್ಕೆ ಎಸೆದ ಆರೋಪಿ ಬೋಳಂತೂರಿನ ಅಬ್ದುಲ್ ರಹಿಮಾನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ತನಿಖೆ ಅಗತ್ಯವಿದ್ದಲ್ಲಿ ಮತ್ತೆ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬೋಳಂತೂರಿನ ಸುರಿಬೈಲಿನ ಅಬ್ದುಲ್ ಸಮದ್ (19) ಎಂಬಾತನನ್ನು ಆರೋಪಿ ಅಬ್ದುಲ್ ರಹಿಮಾನ್ ಇರಾ ಮೂಳೂರುಪದವಿನ ಗುಡ್ಡದಲ್ಲಿ ಸುಟ್ಟು ಬಳಿಕ ಆಳವಾದ ಹೊಂಡಕ್ಕೆ ಮೃತದೇಹವನ್ನು ಎಸೆದು ಹೋಗಿದ್ದ. ಆದರೆ ಈ ವಿಚಾರ ಮನೆಯವರಿಗೆ ತಿಳಿದಿರಲಿಲ್ಲವಾದ ಕಾರಣ ಸಮದ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಆರೋಪಿಯ ಸಂಬಂಧಿಕ ಸಲೀಂ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿ ಆರೋಪಿ ಅಬ್ದುಲ್ ರಹಿಮಾನ್ನನ್ನು ಬಂಧಿಸಲಾಗಿತ್ತು. ಆರೋಪಿ ನೀಡಿದ ಮಾಹಿತಿಯಂತೆ ಕೊಲೆಗೈದ ಸುಮಾರು ಏಳೆಂಟು ದಿನಗಳ ಬಳಿಕ ಸಮದ್ನ ಮೃತದೇಹವನ್ನು ಆಳವಾದ ಹೊಂಡದಿಂದ ಹೊರ ತೆಗೆಯಲಾಗಿತ್ತು.