ಮಂಗಳೂರು, ನ 12 (DaijiworldNews/SM): ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಆದರೂ ಇದಕ್ಕೆ ಯಾರೂ ಹೆದರಲ್ಲ ಎಂದು ಬಂಗಾರಪ್ಪ ಗುಡುಗಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಇದೆ. ಇಲ್ಲಿ ಬಿಜೆಪಿಗೆ ೪೦ ಶೇ ಅಲ್ಲ ೧೦೦ ಶೇ ಹೋಗ್ತಾ ಇದೆ. ಇಲ್ಲಿನ ಬಂದ ಹಣ ಧರ್ಮ ಧರ್ಮ ಮಧ್ಯೆ ವಿಷ ಬೀಜ ಬಿತ್ತನೆಗೆ ಬಳಕೆ ಮಾಡ್ತಾರೆ. ಗಡ್ಕರಿ ಬಂದು ಹೇಳ್ತಾರೆ ೬೦ ಕಿಮಿ ಅಂತರದಲ್ಲಿ ಟೋಲ್ ಇರಬಾರದು. ಕಾನೂನು ಬಾಹಿರ ಅಂತಾರೆ ಆದ್ರೆ ಅದನ್ನು ತೆರವಿಗೆ ಮುಂದಾಗಲ್ಲ. ಇಲ್ಲಿ ಅವರಿಗೆ ಹಣ ಬರುತ್ತೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಗರು ಹಿಂದುಳಿದ ವರ್ಗದ ಸಮಾವೇಶ ಮಾಡುವ ಯೋಗ್ಯತೆ ಕಳೆದು ಕೊಂಡಿದೆ. ನಾವು ಮಾಡಿದ ಯೋಜನೆಯನ್ನು ಸರಿಯಾಗಿ ಇವ್ರು ಅನುಷ್ಠಾನ ಮಾಡಲಿಲ್ಲ. ಹಿಂದುತ್ವ ಎನ್ನುವ ಇವರು ಯಾವ ದೇವಸ್ಥಾನಕ್ಕೆ ಅನುದಾನ ಕೊಟ್ಟಿದ್ದಾರೆ? ಒಂದು ದೇವಸ್ಥಾನಕ್ಕಾದ್ರು ಅನುದಾನ ಕೊಟ್ಟಿದ್ದಾರ? ಇದ್ರ ಬಗ್ಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ಸಮಾವೇಶ ಮಾಡಲಿದೆ ಎಂದರು.
ಈ ಭಾಗದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಚುನಾವಣೆಯಲ್ಲಿ ಜಾತಿ, ಧರ್ಮ ಆಧಾರದಲ್ಲಿ ಮತ ಕೇಳಲ್ಲ. ಅಭಿವೃದ್ಧಿ ಯೋಜನೆಗಳ ಮೇಲೆ ನಮ್ಮ ಪ್ರಣಾಳಿಕೆ ಮೇಲೆ ಮತ ಕೇಳಲಿದ್ದೇವೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.