ಕಾಸರಗೋಡು, ನ 11 (DaijiworldNews/MS): ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ ರವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಐವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಇವರು ವೈದ್ಯರಿಗೆ ಬೆದರಿಕೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಈ ನಡುವೆ ಬದಿಯಡ್ಕ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಹರತಾಳ ಪೂರ್ಣವಾಗಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿ ವೆ. ವಿಶ್ವ ಹಿಂದೂ ಪರಿಷತ್ ನೇತತ್ವದಲ್ಲಿ ಬದಿಯಡ್ಕ ದ ಲ್ಲಿ ಪ್ರತಿ ಭಟನೆ ನಡೆಸಲಾಯಿತು. ಕೃಷ್ಣ ಮೂರ್ತಿ ರವರ ಮೃತ ದೇಹವನ್ನು ಇಂದು ಮುಂಜಾನೆ ಬದಿಯಡ್ಕಕ್ಕೆ ತರಲಾಗಿತ್ತು. ಬಳಿಕ ಮನೆಯ ಹಿತ್ತಿಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು
ಅಲಿ ತುಪ್ಪಕಲ್,ಮುಹಮ್ಮದ್ ಹನೀಫ್ , ಅಶ್ರಫ್, ಮುಹಮ್ಮದ್ ಮತ್ತು ಉಮ್ಮರುಲ್ ಫಾರೂಕ್ ಮೊದಲಾದವರನ್ನು ಬಂಧಿಸಲಾಗಿದೆ.
ಕ್ಲಿನಿಕ್ ಗೆ ತೆರಳಿ ಇವರು ವೈದ್ಯರಿಗೆ ಬೆದರಿಕೆವೊಡ್ಡಿದ್ದರು. ಮಂಗಳವಾರ ಘಟನೆ ನಡೆದಿತ್ತು . ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಬ ಆರೋಪ ಘಟನೆಗೆ ಕಾರಣವಾಗಿತ್ತು. ಬೆದರಿಕೆ ಬಳಿಕ ಡಾ. ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು. ಮೊಬೈಲ್ ಕ್ಲಿನಿಕ್ ನಲ್ಲಿ ಬಿಟ್ಟು ಹೋಗಿದ್ದರು. ನಾಪತ್ತೆ ಕುರಿತು ಪತ್ನಿ ನೀಡಿದ ದೂರಿ ನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು.ಈ ನಡುವೆ ಕುಂದಾಪುರ ದ ರೈಲು ಹಳಿಯಲ್ಲಿ ವೈದ್ಯರ ಮೃತದೇಹ ಗುರುವಾರ ಪತ್ತೆಯಾಗಿತ್ತು.