ಬಂಟ್ವಾಳ, ನ. 09 (DaijiworldNews/SM) : ಗಾಂಜ ವ್ಯಸನಿಯ ಅನೈತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆಯಾದ ಯುವಕ ಸುರಿಬೈಲು ನಿವಾಸಿ ಸಮಾದ್ ನ ಶವವನ್ನು ಇಂದು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.ಸ್ಥಳಕ್ಕೆ ಮಂಗಳೂರು ವಿಧಿವಿಜ್ಞಾನ ಪ್ರಯೋಗಲಾಯ ಹಾಗೂ ಕೆ.ಎಸ್.ಹೆಗ್ಡೆ ಮೆಡಿಕಲ್ ಆಸ್ಪತ್ರೆಯ ಮಹಾಬಲೇಶ್ವರ ಶೆಟ್ಟಿ ಹಾಗೂ ತಂಡ ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಶವವನ್ನು ಹಸ್ತಾಂತರ ಮಾಡಲಾಯಿತು.
ಘಟನೆಯ ವಿವರ
ಸುರಿಬೈಲು ನಿವಾಸಿ ಸಮಾದ್(19) ಕೊಲೆಯಾದ ಯುವಕನಾಗಿದ್ದು , ನ.1 ರಂದು ಈತನ ಕೊಲೆಯಾಗಿತ್ತು.
ಸಾಲೆತ್ತೂರು ಸಮೀಪದ ಕಟ್ಟೆಪುನಿ ನಿವಾಸಿ ರಿಕ್ಷಾ ಚಾಲಕ ಅಬುಬಕ್ಕರ್ ಅವರು ಕೊಲೆ ಆರೋಪಿಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಯ ದೃಷ್ಟಿಯಿಂದ ಪೊಲೀಸ್ ಕಸ್ಟಡಿಗೆ ಹ ತೆಗೆದುಕೊಳ್ಳುವ ಅವಕಾಶಗಳಿವೆ ಎಂದು ತಿಳಿದುಬಂದಿದೆ.
ಸಮಾದ್ ಹಾಗೂ ಅದ್ರಾಮ ಇಬ್ಬರು ಸ್ನೇಹಿತರಾಗಿದ್ದು ಗಾಂಜಾ ವ್ಯಸನಿಗಳಾಗಿದ್ದಾರೆ, ಜೊತೆಗೆ ಇವರೊಳಗೆ ಅನೈತಿಕ ವ್ಯವಹಾರಗಳು ನಡೆಯುತ್ತಿದ್ದವು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಳಿಕ ಸಮಾದ್ ನನ್ನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಗಾಂಜಾ ವ್ಯಸನದ ಜೊತೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಮಾದ್ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೋಗುವುದು ಅದ್ರಾಮನಿಗೆ ಇಷ್ಟವಿರಲಿಲ್ಲ. ಹಾಗಾಗಿ ಹೋಗುವದಕ್ಕೆ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ.
ಈ ಮಧ್ಯೆ ಅದ್ರಾಮ ಸಮಾದ್ ನನ್ನು ಊರಿಗೆ ಬರುವಂತೆ ಒತ್ತಾಯಿಸಿದ್ದು, ನ. 1 ರಂದು ಊರಿಗೆ ಬಂದಿದ್ದ ಸಮಾದ್ ಹಾಗೂ ಅದ್ರಾಮ ಇಬ್ಬರು ಸೇರಿ ಇರಾ ಜನನಿಬಿಡ ಗುಡ್ಡವೊಂದಕ್ಕೆ ಅದ್ರಾಮನ ರಿಕ್ಷಾದಲ್ಲಿ ಹೋಗಿದ್ದರು.
ಅಲ್ಲಿ ಅವರು ಏನು ವ್ಯವಹಾರ ನಡೆದಿತ್ತು ಎಂಬುದು ಇನ್ನು ತನಿಖೆಯ ವೇಳೆ ಬಯಲಾಗಬೇಕಿದೆ.
ಆದರೆ ಅರೋಪಿ ಪ್ರಾಥಮಿಕ ತನಿಖೆಯ ವೇಳೆ ಹೇಳಿದಂತೆ ಇಬ್ಬರು ಗಾಂಜಾ ಸೇವಿಸಿದ ಬಳಿಕ ಈತ ಬೆಂಗಳೂರಿಗೆ ತೆರಳದಂತೆ ಇವರಿಬ್ಬರ ಮಧ್ಯೆ ಜಗಳ ಆಗಿದೆ.
ಬಳಿಕ ಇಬ್ಬರೂ ಗುಡ್ಡೆಯಲ್ಲಿ ಮಲಗಿದ್ದರು.
ಅ ಸಂದರ್ಭದಲ್ಲಿ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗ ವಾಗಿದೆ ಎಂದು ಹೇಳಲಾಗಿದೆ.
ಈ ವಿಚಾರವನ್ನು ಅದ್ರಾಮ ಅವರ ಸಂಬಂಧಿಯೊರ್ವನಿಗೆ ತಿಳಿಸಿದ ಕಾರಣ ಕೊಲೆ ವಿಚಾರ ಬಹಿರಂಗ ವಾಗಿದೆ. ಅವರೆಗೆ ಅದ್ರಾಮನ ಮನೆಯವರು ಈತ ಬೆಂಗಳೂರಿಗೆ ತೆರಳಿದ್ದಾನೆ ಎಂಬುದೇ ನಂಬಿಕೆಯಾಗಿತ್ತು.
ಘಟನಾ ಸ್ಥಳದಲ್ಲಿ ಶವದ ಪರೀಕ್ಷೆ ನಡೆದಿದ್ದು, ಸ್ಥಳದಲ್ಲಿ ಅಡಿಸನಲ್ ಎಸ್.ಪಿ.ಕುಮಾರ್ ಚಂದ್ರ, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ , ಎಸ್.ಐ.ಹರೀಶ್ ಹಾಗೂ ಸಿಬ್ಬಂದಿ ಗಳು ಹಾಜರಿದ್ದರು.