ಉಡುಪಿ, ನ 09 (DaijiworldNews/MS): ಜಗವೆಲ್ಲಾ ಸಂಭ್ರಮಿಸುವ ಕ್ರಿಸ್ಮಸ್ ಹಬ್ಬದ ಆಚರಣೆಗೆ ಕೇಲವೇ ವಾರಗಳು ಬಾಕಿ ಇವೆ, ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್, ಸೈಂಟ್ ಮೆರಿಸ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಆಶ್ರಯದಲ್ಲಿ ಎರಡನೇ ಬಾರಿಗೆ “ನತಾಲ್ ಸೊಭಾಣ್ 22”, ಕ್ರಿಸ್ಮಸ್ ಸಂಭ್ರಮ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
“ನತಾಲ್ ಸೊಭಾಣ್ 22” ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧಿಸಿದ ನೃತ್ಯ, ನಾಟಕ, ಸಂಗೀತ (ಕ್ಯಾರಲ್ಸ್, ಟ್ಯಾಬ್ಲೋ) ದ ಸಮ್ಮಿಲನವಾಗಿದೆ, ಸ್ಪರ್ಧಾ ತಂಡಗಳು ತಮ್ಮ ಪ್ರದರ್ಶನದ ಮೂಲಕ ಸಮಾಜಕ್ಕೆ ಉತ್ತಮ ಮೌಲ್ಯಯುತ ಸಂದೇಶವನ್ನು ಕೂಡಾ ನೀಡಬೇಕಾಗಿದೆ.
ಡಿಸೆಂಬರ್ 11, 2022 ರಂದು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಸಿ) ಕನ್ನರ್ಪಾಡಿಯಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರಥಮ ಬಹುಮಾನವಾಗಿ ರುಪಾಯಿ 25 ಸಾವಿರ ನಗದು, ಟ್ರೊಫಿ ದ್ವಿತೀಯ ಬಹುಮಾನವಾಗಿ ರುಪಾಯಿ 20 ಸಾವಿರ ನಗದು ಟ್ರೋಫಿ ಮತ್ತು ತೃತೀಯ ಬಹುಮಾನವಾಗಿ ರುಪಾಯಿ 15 ಸಾವಿರ ನಗದು ಟ್ರೋಫಿ ಲಭಿಸಲಿದೆ.
ನೋಂದಾವಣೆಗೆ ಕೊನೆಯ ದಿನಾಂಕ ನವೆಂಬರ್ 20, 2022.
ಸ್ಪರ್ಧೆಯ ನಿಯಮಗಳು:
· ಸ್ಪರ್ಧೆಯಲ್ಲಿ ಯಾರು ಕೂಡಾ ಭಾಗವಹಿಸಬಹುದು, ಯಾವುದೇ ರೀತಿಯ ನಿರ್ಭಂದ ಗಳು ಇಲ್ಲ
· ಪ್ರತಿ ತಂಡಕ್ಕೆ ಪ್ರದರ್ಶನಕ್ಕೆ ಗರಿಷ್ಟ 15+3 ನಿಮಿಷಗಳ ಅವಕಾಶ
· ಕ್ರಿಸ್ಮಸ್ ಸಂಬಂದಿಸಿದ ನಾಟಕ, ನೃತ್ಯ ಮತ್ತು ಸಂಗೀತ ( ಕ್ಯಾರಲ್ಸ್, ಟ್ಯಾಬ್ಲೋ) ಪ್ರದರ್ಶನವನ್ನು ತಂಡಗಳು ನೀಡಬೇಕು
· ತಂಡದ ಪ್ರದರ್ಶನ ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು
· ನೃತ್ಯ ಮತ್ತು ನಾಟಕಕ್ಕೆ ಸಿಡಿ ಅಥವಾ ರೆಕಾರ್ಡೆಡ್ ಸಂಗೀತದ ಬಳಕೆ ಮಾಡಬಹುದು. ಕ್ಯಾರಲ್ಸ್ ಗಾಯನಕ್ಕೆ ರೆಕಾರ್ಡೆಡ್ ಸಂಗೀತ ಬಳಸುವಂತಿಲ್ಲ
· ಪ್ರತಿ ತಂಡದಲ್ಲಿ ಕನಿಷ್ಟ 12 ಮಂದಿ, ಗರಿಷ್ಟ 25 ಮಂದಿ ಸ್ಪರ್ಧಾಳುಗಳು ಇರಬಹುದು.
· ಕೊಂಕಣಿ, ಕನ್ನಡ, ಇಂಗ್ಲಿಷ್ ಭಾಷೆ ಬಳಕೆಗೆ ಅವಕಾಶ ಇದೆ. ಆದರೆ ಎರಡು ಭಾಷೆಗಳನ್ನು ಮಿಶ್ರಣ ಮಾಡಿ ಬಳಕೆ ಮಾಡುವಂತಿಲ್ಲ
· ಆಯೋಜಕರು ನೀಡುವ ನೋಂದಾವಣೆ ಪತ್ರದಲ್ಲಿ ತಂಡಗಳು ಸರಿಯಾದ ಮಾಹಿತಿಯನ್ನು ನೀಡುವುದು
· ವೇದಿಕೆ ತಯಾರಿಗೆ ಪ್ರತಿ ತಂಡಕ್ಕೆ 5 ನಿಮಿಷಗಳ ಕಾಲಾವಕಾಶ ಇದೆ.
· ತಂಡದ ಪ್ರದರ್ಶನವು ಇತರರಿಗೆ ನೋವುಂಟು ಮಾಡುವಂತೆ ಇರಬಾರದು.
· ಪ್ರತಿ ತಂಡದ ಪ್ರದರ್ಶನವು ನಾಟಕ, ನೃತ್ಯ, ಸಂಗೀತದ ಸಮ್ಮಿಳಿತವಾಗಿರಬೇಕು
· ಬೆಂಕಿ ಮತ್ತು ಪ್ರಾಣಿಗಳ ಬಳಕೆಯನ್ನು ನಿಷೇಧಿಸಿದೆ
· ಪ್ರದರ್ಶನ ಮುಗಿದ ಬಳಿಕ ವೇದಿಕೆಯನ್ನು ಸ್ವಚ್ಛಗೊಳಿಸುವುದು ತಂಡದ ಜವಾಬ್ದಾರಿ
· ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು
· ತೀರ್ಪುಗಾರರ ತೀರ್ಮಾನವೇ ಅಂತಿಮ. ತೀರ್ಪುಗಾರರ ನಿರ್ಧಾರದ ಮೇಲೆ ಟೀಕೆ – ಟಿಪ್ಪಣಿಗೆ ಅವಕಾಶ ಇಲ್ಲ.
· ಪ್ರತಿ ತಂಡದ ಪ್ರದರ್ಶನವನ್ನು ಕ್ರಿಸ್ಮಸ್ ಸಂಧರ್ಭದಲ್ಲಿ ದಾಯ್ಜಿವಲ್ಡ್ 247 ವಾಹಿನಿಯಲ್ಲಿ ಪ್ರಸಾರ ಮಾಡಲಾಗುವುದು.
· ಸ್ಪರ್ಧೆಯಲ್ಲಿ ಗರಿಷ್ಟ 16 ತಂಡಗಳಿಗೆ ಭಾಗವಹಿಸಲು ಅವಕಾಶ ಇದೆ. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ.
· 12 ಕ್ಕಿಂತ ಅಧಿಕ ತಂಡಗಳು ಸ್ಪರ್ಧೆಗೆ ನೋಂದಾಯಿಸಿದ್ದಲ್ಲಿ 3 ಸಮಧಾನಕರ ಬಹುಮಾನಗಳನ್ನು ನೀಡಲಾಗುವುದು.
· ನೋಂದಾವಣೆಗೆ ಕೊನೆಯ ದಿನಾಂಕ: ನವೆಂಬರ್ 20, 2022
ವಿಶೇಷ ಸೂಚನೆಗಳು:
· ಸಂಗೀತಗಾರರಿಗೆ ಒಂದಕ್ಕಿಂತ ಹೆಚ್ಚು ತಂಡಗಳಲ್ಲಿ ಭಾಗವಹಿಸಲು ಅವಕಾಶ ಇದೆ
· ಒಂದು ತಂಡದಲ್ಲಿ ಸಂಗೀತಗಾರರಾಗಿ, ಮತ್ತೊಂದು ತಂಡದಲ್ಲಿ ನಟ/ನಟಿಯಾಗಿ ಭಾಗವಹಿಸಲು ಅವಕಾಶ ಇಲ್ಲ.
· ಪ್ರತಿ ತಂಡಕ್ಕೆ ಗರಿಷ್ಟ 3 ಸಂಗೀತ ಉಪಕರಣಗಳನ್ನು ಬಳಸಲು ಅವಕಾಶ ಇದೆ
· ಒಂದು ತಂಡದ ಸ್ಪರ್ಧಾಳು ಮತ್ತೊಂದು ತಂಡದಲ್ಲಿ ಭಾಗವಹಿಸಲು ಅವಕಾಶ ಇಲ್ಲ.
· ತಂಡಕ್ಕೆ ಸಹಾಯ ಮಾಡಲು ಪ್ರತಿ ತಂಡವು 5 ಮಂದಿ ಸಹಾಯಕರನ್ನು ಕರೆ ತರಲು ಅವಕಾಶ ಇದೆ.
ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ದಾಯ್ಜಿವಲ್ಡ್ ಉಡುಪಿ
ಮೂರನೇ ಮಹಡಿ, ಮಾಂಡವಿ ಟ್ರೇಡ್ ಸೆಂಟರ್
ಕಡಿಯಾಳಿ, ಉಡುಪಿ
+91 9900161556 / +91 7338637682
ನತಾಲ್ ಸೊಭಾಣ್ ಮೊದಲ ಆವೃತ್ತಿಯನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://www.youtube.com/playlist?list=PLUbSzAGYq89O-BrOuZXd_XlX8DfYfg4Ey