ಉಡುಪಿ, ನ 08 (DaijiworldNews/HR): ಪ್ರಖ್ಯಾತ ಚಿನ್ನಾಭರಣ ಸಂಸ್ಥೆ ಭೀಮ ಜುವೆಲ್ಲರ್ಸ್ ಇದರ ಸಿಎಸ್ಆರ್ ಯೋಜನೆಯ ಅಂಗವಾಗಿ ಉಡುಪಿ ಜಿಲ್ಲಾ ಪೋಲಿಸ್ ಉಡುಪಿ ಸಂಚಾರಿ ಠಾಣೆಗೆ 20 ಬ್ಯಾರಿಕೇಡ್ ಗಳನ್ನು ಹಸ್ತಾಂತರಿಸಲಾಯಿತು. ಭೀಮ ಜುವೆಲ್ಲರ್ಸ್ ನ ಉಡುಪಿ ಶಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭೀಮ ಜುವೆಲ್ಲರ್ಸ್ ಇದರ ಕಾರ್ಪೋರೇಟ್ ಅಫೇರ್ಸ್ ಸೀನಿಯರ್ ಮ್ಯಾನೇಜರ್ ಶ್ರೀಪತಿ ಭಟ್ ನೂತನ ಬ್ಯಾರಿಕೇಡ್ ಗಳನ್ನು ಉಡುಪಿ ಸಂಚಾರ ಠಾಣೆಯ ಎಸ್ ಐ ಅಬ್ದುಲ್ ಖಾದರ್ ಅವರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಈ ಬ್ಯಾರಿಕೇಡ್ ಗಳನ್ನು ನಾವು ಸಂಚಾರಿ ಪೋಲಿಸರಿಗೆ ನೀಡುತ್ತಿದ್ದೇವೆ. ನಮಗೆ ಆದ ವ್ಯವಹಾರದಲ್ಲಿ ಉಳಿತಾಯ ಮಾಡಿ ಸಾಮಾಜಿಕ ಜವಬ್ದಾರಿಯನ್ನು ಮಾಡಿದ್ದೇವೆ. ಇನ್ನು ಮುಂದೆಯೂ ನಾವು ಸಮಾಜಕ್ಕೆ ಸಹಾಯ ಮಾಡುತ್ತೇವೆ ಎಂದು ಭರವಸೆ ನಿಡುತ್ತೇವೆ ಎಂದರು.
ಉಡುಪಿ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ಮಾತನಾಡಿ, ಉಡುಪಿ ನಗರದ ಸಂಚಾರ ನಿಯಂತ್ರಣಕ್ಕೆ ಬ್ಯಾರಿಕೇಡ್ ಅವಶ್ಯಕತೆ ಇದ್ದತ್ತು. ಈ ಕಾರಣಕ್ಕಾಗಿ ನಾವು ಭೀಮ ಜುವೆಲ್ಲರ್ಸ್ ಸಂಸ್ಥೆಯವರಲ್ಲಿ ವಿನಂತಿಸಿದ್ದೆವು. ನಮ್ಮ ವಿನಂತಿಯನ್ನು ಮನ್ನಿಸಿ ಇಂದು ಭೀಮ ಜುವೆಲ್ಲರ್ಸ್ ನವರು ಬ್ಯಾರಿಕೇಡ್ ಗಳನ್ನು ಹಸ್ತಾಂತರಿಸಿದ್ದಾರೆ. ಇದು ಉಡುಪಿ ನಗರೆದ ಸಂಚಾರ ನಿಯಂತ್ರಣಕ್ಕೆ ಬಹಳ ಪ್ರಯೋಜನವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಉಡುಪಿ ಶೋರೋಂ ಮ್ಯಾನೇಜರ್ ಅಶ್ವಜಿತ್ ರಾವ್, ಡೆಪ್ಯುಟಿ ಮ್ಯಾನೇಜರ್ ರಾಘವೇಂದ್ರ ಭಟ್, ಅಸೋಸಿಯೇಟ್ ಮ್ಯಾನೇಜರ್ ಪ್ರಸನ್ನ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.