ಸುರತ್ಕಲ್, ನ 07 (DaijiworldNews/SM): ಸಂಸದ ನಳಿನ್ ಕುಮಾರ್ ಅನಾರೋಗ್ಯದಿಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಹೋರಾಟಗಾರ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದಾರೆ.
ಒಂದೊಮ್ಮೆ ನಳೀನ್ ಕುಮಾರ್ ಕಟೀಲ್ ಅನಾರೋಗ್ಯದಲ್ಲಿದ್ದರೆ ಶೀಘ್ರ ಗುಣಮುಖರಾಗಲಿ. ನಳಿನ್ ಗುಣಮುಖರಾಗಲು ನಾವು ಪ್ರಾರ್ಥಿಸುತ್ತೇವೆ. ಆದರೆ, ನಳಿನ್ ಕುಮಾರ್ ಅವರು ಅನಾರೋಗ್ಯದಲ್ಲಿಲ್ಲ. ಬದಲಾಗಿ ಅವರು ಅಜ್ಞಾತವಾಸದಲ್ಲಿದ್ದಾರೆ. ನಮ್ಮ ಹೋರಾಟಕ್ಕೆ ಮಣಿದು ಅವರು ಅಜ್ಞಾತವಾಸದಲ್ಲಿದ್ದಾರೆ ಎಂದು ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸೋಮವಾರದಂದು ಹೋರಾಟಗಾರರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.