ಉಡುಪಿ, ನ 07 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಸಿದ್ದರಾಮಯ್ಯ ಜಾತಿಯನ್ನು ಒಡೆದಿದ್ದಾರೆ. ಲಿಂಗಾಯತ ಧರ್ಮವನ್ನು ಒಡೆಯಲು ನೋಡಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಲೆ ಮಕ್ಕಳಲ್ಲಿ ಜಾತಿಯನ್ನು ತಂದಿಡಲು ನೋಡಿದರು. ಪ್ರವಾಸಕ್ಕೆ ಒಂದು ಜಾತಿಯವರು ಹೋಗಬೇಕು ಅಂದರು. ಶಾದಿ ಭಾಗ್ಯ ಒಂದು ಧರ್ಮದವರಿಗೆ ಕೊಟ್ಟರು ಎಂದು ವಾಗ್ದಾಳಿ ನಡೆಸಿದ್ದಾರೆ. ಕುಟ್ಟಪ್ಪ ಸಾವಿಗೆ ಯಾರು ಹೊಣೆ? ಕುಟ್ಟಪ್ಪ ಸಾವು ನಿಮ್ಮ ಕೊಡುಗೆಯಾಗಿದೆ. ಡಿಕೆಶಿ ಮುಖ್ಯಮಂತ್ರಿಯೋ, ಸಿದ್ದರಾಮಯ್ಯ ಮುಖ್ಯಮಂತ್ರಿಯೋ ಎಂದು ಕಚ್ಚಾಡುತ್ತಿದ್ದಾರೆ. ನಿಮ್ಮ ಮನೆಯನ್ನು ಮೊದಲು ಸರಿ ಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶವನ್ನು ಸರಿ ಮಾಡಲು ಆಗಿಲ್ಲ ನಿಮಗೆ. ಸಿದ್ದರಾಮಯ್ಯನವರನ್ನು ಕೂಡಾ ರಾಜ್ಯದ ಜನ ನಂಬಲ್ಲ. ಮೊದಿಯಂತಹ ನೇತೃತ್ವ ಇನ್ನೊಮ್ಮೆ ನಮಗೆ ಸಿಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಹೇಳಿದರು.