ಮಂಗಳೂರು, ನ 07 (DaijiworldNews/HR): ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಮುಖಂಡ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇವರಿಬ್ಬರೂ ಎಲ್ಲೂ ತಲೆ ಮರಿಸಿಕೊಂಡಿರಲಿಲ್ಲ. ಸಾರ್ವಜನಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದ್ರು. ಯಾಕಾಗಿ ಅವರನ್ನು ಈ ರೀತಿ ಬಂಧಿಸಬೇಕಿತ್ತು. ಎಸ್ಡಿಪಿಐ ಮುಖಂಡರನ್ನು ವಿಚಾರಣೆಗೆ ಕರೆದ್ರೆ ಅವ್ರೇ ಬರ್ತಾರೆ. ಅದು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಬರುವ ವೇಳೆ ಯಾಕೆ ಬಂಧಿಸಬೇಕಿತ್ತು? ಎಂದು ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಎಸ್ಡಿಪಿಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಇಲಾಖೆ ಎಲ್ಲಾ ಕಡೆ ಅನುಮತಿ ನೀಡಿದೆ. ಆದ್ರೆ ಇವತ್ತು ಮಂಗಳೂರು ಪೊಲೀಸರು ಅನುಮತಿ ರದ್ದುಗೊಳಿಸಿದ್ದಾರೆ. ಪ್ರತಿಭಟನೆ ಜನರ ಹಕ್ಕು ಅದನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ. ಪೋಲಿಸ್ ಇಲಾಖೆ ಸಂವಿಧಾನವನ್ನು ಮರೆತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮಂಗಳೂರು ಪೊಲೀಸರು ಪ್ರಿವೆಂಟಿವ್ 15ಮಂದಿ ಬಂಧನವಾಗಿದೆ. ಇದು ಯಾವ ರೀತಿಯ ಭಟ್ಟಂಗಿತನ ಪೊಲೀಸರದ್ದು. ಇದರೊಂದಿಗೆ ನಮ್ಮ 16 ಸೇವಾ ಕೇಂದ್ರಗಳಿಗೆ ಬೀಗಾ ಹಾಕಿದ್ದಾರೆ. ಅಲ್ಲಿ ಸರ್ಕಾರಿ ಯೋಜನೆಗಳಿಗಾಗಿ ಸಾರ್ವಜನಿಕರು ಬರ್ತಾ ಇದ್ರು. ಈ ಸೇವಾ ಕಚೇರಿಗಳಿಗೆ ಬೀಗಾ ಹಾಕಿ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ. ಎಲ್ಲಾ ರಕ್ತ ನಿಧಿಗಳಲ್ಲಿ ಎಸ್ಡಿಪಿಐ ಕಾರ್ಯಕರ್ತರ ರಕ್ತ ಇದೆ. ಅದನ್ನು ಕೂಡ ಪೊಲೀಸ್ ಕಮಿಷನರ್ ವಶಕ್ಕೆ ಪಡೆದುಕೊಂಡು ಹೋಗಲಿ ಎಂದರು.
ಇನ್ನು ನಮ್ಮ ಹಕ್ಕಿನ ವಿರುದ್ಧ ಯಾರೇ ನಿಂತ್ರೂ ನಾವು ಹೋರಾಟ ಮಾಡ್ತೇವೆ. ಪೊಲೀಸ್ ಇಲಾಖೆ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಕಾನೂನು ಮೂಲಕ ಈ ಹೋರಾಟ ನಾವು ಮಾಡಲಿದ್ದೇವೆ. ಪೊಲೀಸ್ ಇಲಾಖೆ ರಾತ್ರಿ ವೇಳೆ ಮುಖಂಡರ ಮನೆಗೆ ದಾಳಿ ಮಾಡುದು ನಿಲ್ಲಿಸಬೇಕು. ಟೋಲ್ ಹೋರಾಟಗಾರರ ಮನೆಗೂ ರಾತ್ರಿ ಹೋಗ್ತಾರೆ. ಮಹಿಳಾ ಹೋರಾಟಗಾರೆಯನ್ನು ನೆಲದ ಮೇಲೆ ಹಾಕಿ ಎಲೆದಾಡ್ತಾರೆ. ಮಹಿಳಾ ಮುಖಂಡೆಯ ಮೇಲೆ ಅವಹೇಳನ ಬರಹ ಬರೆದ ಸಂಗಿಯನ್ನು ಬಂಧಿಸದ ಬಿಟ್ಟಿದ್ದೀರಿ? ಇದ್ರ ವಿರುದ್ಧ ನಾವು ಧ್ವನಿ ಎತ್ತಲಿದ್ದೇವೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.