ಮಂಗಳೂರು, ನ 07 (DaijiworldNews/HR): ನಗರದ ಗುತ್ತಿಗೆದಾರರಿಗೆ ಉಪಕರಣ ನೀಡುವುದಾಗಿ ವಂಚಿಸಿ 10 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದ ವ್ಯಕ್ತಿಯೋರ್ವನನ್ನು ಉತ್ತರ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆ
ಮಹಾರಾಷ್ಟ್ರದ ಯೋಧಮಾಲ್ ರಾಡಿಘಂವ್ ಮೂಲದ ಅಮೋಲ್ ಸರ್ಜೆರಾವ್ ಉರ್ಕುಡೆ (23) ಬಂಧಿತ ಆರೋಪಿ.
ನಗರದ ಗುತ್ತಿಗೆದಾರ ಎಂ.ಕುಮಾರೇಶ್ ಅವರು ತಮ್ಮ ನೌಕರ ಕಿಶೋರ್ ಕುಮಾರ್ ಮೂಲಕ ಉರ್ಕುಡೆ ಅವರನ್ನು ಸಂಪರ್ಕಿಸಿದ್ದರು. ಒಪ್ಪಂದವನ್ನು 13 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಮತ್ತು 10 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ಮಹಾರಾಷ್ಟ್ರದಿಂದ ಉಪಕರಣ ತರಲು ನೌಕರ ಕಿಶೋರ್ ಕುಮಾರ್ ಅವರನ್ನು ಕುಮರೇಶ್ ಕಳುಹಿಸಿದಾಗ ಆರೋಪಿ ಪತ್ತೆಯಾಗಿರಲಿಲ್ಲ. ಆತನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.
ಇನ್ನು ಆರೋಪಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಇನ್ಸ್ ಪೆಕ್ಟರ್ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಅಮೋಲ್ ನನ್ನು ಬಂಧಿಸಿದ್ದಾರೆ.