ಉಡುಪಿ, ಫೆ 20(SM): ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಅಂಗವಿಕಲತೆಯನ್ನು ಪತ್ತೆ ಹಚ್ಚುವ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 14 ವಿಶೇಷ ಮಕ್ಕಳ ಶಾಲೆಗಳಿದ್ದು, ಅವುಗಳ ಸಂಖ್ಯೆ ಕಡಿಮೆ ಆಗಬೇಕಿದೆ. ಅಂಗವಿಕಲ ಮಕ್ಕಳನ್ನು ತಂದೆ-ತಾಯಿಗಳ ಆಶ್ರಯದಲ್ಲೇ ಬೆಳೆಸಿದರೆ ಉತ್ತಮ.
ಮಕ್ಕಳಲ್ಲಿನ ವಿವಿಧ ರೀತಿಯ ಅಂಗವಿಕಲತೆಯನ್ನು ಪತ್ತೆ ಹಚ್ಚಲು ಪೋಷಕರು ಹಲವು ವೈದ್ಯರನ್ನು ಸಂದರ್ಶಿಸಬೇಕಾಗಿದೆ ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಹ ಬಹಳ ಕಡೆ ತೆರಳಬೇಕಾಗಿದೆ ಇದನ್ನು ತಪ್ಪಿಸುವ ಸಲುವಾಗಿ, ಒಂದೇ ಕಡೆಯಲ್ಲಿ ಎಲ್ಲಾ ವಿಧದ ತಜ್ಞ ವೈದ್ಯರನ್ನು ಒಳಗೊಂಡ 'ಶೀಘ್ರ ಅಂಗವಿಕಲತೆ ಪತ್ತೆ ಹಚ್ಚುವ ಕೇಂದ್ರ'ವನ್ನು ಉಡುಪಿಯಲ್ಲಿ ಆರಂಭಿಸಲಾಗುವುದು ಎಂದು ಬಸವರಾಜ್ ಹೇಳಿದರು.