ಕುಂದಾಪುರ, ನ 06 (DaijiworldNews/HR): ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮ ನ5ರಂದು ಸಂಜೆ ಚಿತ್ತೂರು ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ನಡೆಯಿತು.
ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣಮೂರ್ತಿ ಮಂಜರು, ಹಣ ಯಾರಿಗೂ ಯಾವಾತ್ತಿಗೂ ಶಾಶ್ವತವಲ್ಲ, ದಾನದರ್ಮ ಮಾಡಿದರೆ ಕಷ್ಡಕಾಲದಲ್ಲಿ ಕೈ ಹಿಡಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿಕೂಡಾ ತನ್ನ ಗಳಿಕೆಯಲ್ಲಿ 16%ದಾನ ಮಾಡಬೇಕು ಎಂದು ಧರ್ಮ ಹೇಳುತ್ತದೆ. ನಾನು ಯಾವುದೇ ಪ್ರತಿಪಲಾಪೇಕ್ಷೆಯಿಂದ ಈ ಕಾರ್ಯ ಮಾಡುತ್ತಿಲ್ಲ. ಯಾವುದೇ ರಾಜಕೀಯಕ್ಕೂ ಹೋಗುವುದಿಲ್ಲ. ನನ್ನ ಜೀವನದ ಪರ್ಯಂತ ಇದೇ ರೀತಿ ಸೇವೆ ಮಾಡುತ್ತಾ ಇರುತ್ತೇನೆ. ರಾಜ್ಯೋತ್ಸವ ಪ್ರಶಸ್ತಿ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ನನ್ನ ಸೇವೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿದ ಸರ್ಕಾರಕ್ಕೆ ಕೃತಜ್ಣತೆ ಸಲ್ಲಿಸುತ್ತೇನೆ. ಹುಟ್ಟೂರ ಜನತೆ ನೀಡಿರುವ ಸನ್ಮಾನ ಅತ್ಯಂತ ಸಂತಷ ತಂದಿದೆ ಎಂದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ, ದಾನವನ್ನು ಬಹಳ ಜನ ಮಾಡುತ್ತಾರೆ. ಸ್ವಾರ್ಥ ಇಲ್ಲದೇ ಸದ್ವಿನಿಯೋಗದ ಉದ್ದೇಶದಿಂದ ಮಾಡುವ ದಾನ ಸಾರ್ಥಕತೆ ತಂದುಕೊಡುತ್ತದೆ. ಮಂಜರು ಮಾಡುತ್ತಿರುವ ದಾನ ಧರ್ಮ ಪ್ರಕ್ರೀಯೆ ಎಲ್ಲೆ ಇಲ್ಲದ್ದು. ನಮ್ಮೂರ ಕರ್ಣ ಎಂದು ಅವರನ್ನು ಪರಿಭಾವಿಸಬಹುದು. ಧರ್ಮನಿಷ್ಠೆಯೊಂದಿಗೆ, ದೈವಭಕ್ತರು ಆಗಿರುವ, ಧರ್ಮಿಷ್ಡರು ಆಗಿರುವ ಕೃಷ್ಣಮೂರ್ತಿ ಮಂಜರ ಸೇವೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದರೂ ಆಶ್ಚರ್ಯ ಪಡುವಂತಿಲ್ಲ. ಕೃಷ್ಣಮೂರ್ತಿ ಮಂಜರು ಪರಿಪೂರ್ಣ ವ್ಯಕ್ತಿ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅಭಿನಂದನೆಯ ಮಾತುಗಳನ್ನಾಡಿ ಶಿಕ್ಷಣ, ದಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ಗಳನ್ನು ನೀಡುವುದರೊಂದಿಗೆ ಹೈದರಬಾದ್ನಲ್ಲಿ ಕಲಾಕ್ಷೇತ್ರದಲ್ಲಿಯೂ ತನ್ನದೇಯಸದ ಛಾಪು ಮೂಡಿಸಿದ್ದಾರೆ. ನಿಸ್ವಾರ್ಥ ಸೇವೆಗೆ ಕೃಷ್ಣಮೂರ್ತಿ ಮಂಜರು ಹೆಚ್ಚು ಸೂಕ್ತರೆನಿಸುತ್ತಾರೆ ಎಂದರು.
ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಮಾರಣಕಟ್ಟೆ ದೇವಳದ ಅರ್ಚಕ ಎಂ.ಶ್ರೀಧರ ಮಂಜರು, ಶಾಂತಿ ಕೃಷ್ಣಮೂರ್ತಿ ಮಂಜರು ಉಪಸ್ಥಿತರಿದ್ದರು.
ಹುಟ್ಟೂರ ಜನತೆಯ ಪರವಾಗಿ ಆಭಿನಂದನಾ ಸಮಿತಿ ಮಂಜರು ಸಪತ್ನಿಕರ ಸಹಿತವಾಗಿ, ಬೆಳ್ಳಿಯ ಕಿರೀಟ ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಿತು. ದೊಡ್ಡ ಸಂಖ್ಯೆಯಲ್ಲಿ ವಿವಿಧ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆ, ದೇವಸ್ಥಾನದ ವತಿಯಿಂದ ಅಭಿನಂದಿಸಿದರು.
ಡಾ.ಅತುಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಭಾಗವತ ರಾಘವೇಂದ್ರ ಮಯ್ಯ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿ, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ವಂಡಬಳ್ಳಿ ಜಯರಾಮ ಶೆಟ್ಟಿ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದಿಂದ ಅದ್ದೂರಿಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.