ಮಂಗಳೂರು, ನ 05 (DaijiworldNews/HR): ಆಟೋ ರಿಕ್ಷಾ ಚಾಲಕ ಹಾಗೂ ಪರೋಪಕಾರಿಯಾಗಿದ್ದ ಮೊಂತು ಲೋಬೋ(86 ) ಅವರು ನವೆಂಬರ್ 5ರಂದು ನಿಧನರಾಗಿದ್ದಾರೆ.
ತಮ್ಮ ನಿಸ್ವಾರ್ಥ ಸೇವೆ ಮತ್ತು ಸಮಾಜಸೇವೆಗೆ ಹೆಸರುವಾಸಿಯಾಗಿರುವ ಲೋಬೋ ಅವರಿಗೆ 2012 ರಲ್ಲಿ ಭಾರತೀಯ ವಾಹನ ಚಾಲಕರ ಟ್ರೇಡ್ ಯೂನಿಯನ್ನಿಂದ 'ಸಾರಥಿ ನಂ 1' ಪ್ರಶಸ್ತಿಯನ್ನು ನೀಡಲಾಗಿತ್ತು.
ಲೋಬೋ ಕಂಕನಾಡಿ ಜಂಕ್ಷನ್ನಿಂದ ಆಟೋ ಓಡಿಸುತ್ತಿದ್ದು, ಸಮಾಜಸೇವಕರಾಗಿದ್ದ ಅವರು ತಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಪಾಲು ಬಡವರ ಸೇವೆಗಾಗಿ ಮೀಸಲಿಟ್ಟಿದ್ದರು. ಅಗತ್ಯವಿರುವ ಪ್ರದೇಶಗಳಿಗೆ ನೀರಿನ ನಲ್ಲಿಗಳನ್ನು ಒದಗಿಸುವುದು, ಶಾಲೆಗಳಿಗೆ ನೀರಿನ ನಲ್ಲಿಗಳು, ಆಸ್ಪತ್ರೆಗಳು, ಶಾಲೆಗಳಿಗೆ ಕಂಪ್ಯೂಟರ್, ನಿರ್ಗತಿಕ ಶಾಲಾ ಮಕ್ಕಳಿಗೆ ಸಮವಸ್ತ್ರ, ಅನಾಥಾಶ್ರಮಗಳಿಗೆ ಮತ್ತು ಮಂಗಳೂರಿನಲ್ಲಿ ಮತ್ತು ಇತರ ದೂರದ ನಿರ್ಗತಿಕ ಮಕ್ಕಳಿಗೆ ಚಪ್ಪಲಿ, ಬಟ್ಟೆ ಮತ್ತು ತಿನ್ನಬಹುದಾದ ವಸ್ತುಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದರು.
ಇನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಟೋ ಚಾಲಕರಾಗಿ ಸೇವೆ ಸಲ್ಲಿಸಿದ ಅವರು, ಒಂದೇ ಒಂದು ಪೊಲೀಸ್ ಪ್ರಕರಣ ಅಥವಾ ಅಪಘಾತವನ್ನು ಎದುರಿಸಲಿಲ್ಲ. ಅವರ ವಿಶಿಷ್ಟ ಸಾಧನೆಯನ್ನು ಗುರುತಿಸಿ 2008 ರಲ್ಲಿ ಆರ್ಟಿಒ ಮತ್ತು ಜಿಲ್ಲಾಡಳಿತದಿಂದ ಅಂದಿನ ಜಿಲ್ಲಾಧಿಕಾರಿ ಮಹೇಶ್ ರಾವ್ ಅವರು ಸನ್ಮಾನಿಸಿದ್ದರು.
1957 ರಲ್ಲಿ ತಮ್ಮ ಚಾಲನಾ ಪರವಾನಗಿಯನ್ನು ಪಡೆದಿದ್ದು, ನಗರದ ಮೊದಲ ಆಟೋ ಚಾಲಕರಲ್ಲಿ ಮೊಂತು ಲೋಬೋ ಕೂಡ ಒಬ್ಬರು.