ಬಂಟ್ವಾಳ, ನ 04 (DaijiworldNews/DB): ಇಲ್ಲಿನ ತಾಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರರಾಗಿದ್ದ ಶ್ರೀಧರ್ ಪುತ್ತೂರು ಅವರು ಸೇವಾವಧಿಯಲ್ಲಿ ಕೋವಿಡ್ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸರಕಾರದಿಂದ ಮಂಜೂರಾದ 30 ಲಕ್ಷ ರೂ. ಪರಿಹಾರಧನ ಚೆಕ್ನ್ನು ಅವರ ಪತ್ನಿ ನಳಿನಿ ಅವರಿಗೆ ಹಸ್ತಾಂತರಿಸಲಾಯಿತು.
ಸರ್ಕಾರದ ನಿಯಮದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಚೆಕ್ ಹಸ್ತಾಂತರಿಸಿದರು.
ತಹಶೀಲ್ದಾರ್ ಡಾ.ಸ್ಮಿತಾ ರಾಮು ಉಪಸ್ಥಿತರಿದ್ದರು.