ಮಂಗಳೂರು, ನ 04 (DaijiworldNews/MS): 'ಮ್ಯಾಂಗಲೋರ್' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ದಾಖಲೆಗಳಲ್ಲಿ ಇರುವ ಹೆಸರನ್ನು 'ಮಂಗಳೂರು'ಎಂದು ಬದಲಾವಣೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶಿಸಿದೆ.
ವಿಮಾನ ನಿಲ್ದಾಣದಲ್ಲಿರುವ ಬೋರ್ಡ್ ಸಹಿತ ಸ್ವಾಗತ ಕಮಾನುಗಳಲ್ಲಿ ಈಗಾಗಲೇ "ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ " ಎಂದು ಬರೆಯಲಾಗಿದೆ. ಆದರೆ ಪ್ರಾಧಿಕಾರದ ದಾಖಲೆಗಳಲ್ಲಿ ಮಾತ್ರ ’ ಮ್ಯಾಂಗಲೋರ್’ ಎಂದೇ ಉಲ್ಲೇಖ ಬಾಕಿಯಾಗಿತ್ತು.
ಮಂಗಳೂರು ನಗರದಲ್ಲಿಯೂ’ ಮಂಗಳೂರು ಪದ ಬಳಕೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಹಾಗೂ ದೇಶ ವಿದೇಶದ ಪಾಲುದಾರರ ನಡುವೆ ವ್ಯವಹಾರಕ್ಕೆ ಅನುಕೂಲವಾಗುವಂತೆ ಹೆಸರು ಬದಲಾವಣೆ ಮಾಡಲಾಗಿದೆ. ಡಿ.೧ ರಿಂದ ಇದು ಅಧಿಕೃತವಾಗಿ ಜಾರಿ ಬರಲಿದೆ.