ಮಂಗಳೂರು, ನ 02(DaijiworldNews/MS): ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅ. 22ರಿಂದ ಅ. 31ರ ಅವಧಿಯಲ್ಲಿಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಕ್ಯಾರೆಟ್ ಪರಿಶುದ್ಧತೆಯ 1,46,87,410 ರೂ. ಮೌಲ್ಯದ 2,870 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ
ಚಿನ್ನವನ್ನು ಆರು ಮಂದಿ ಪ್ರಯಾಣಿಕರು ಪೇಸ್ಟ್, ಪೌಡರ್ ರೂಪಕ್ಕೆ ಪರಿವರ್ತಿಸಿ ಬನಿಯನ್, ಜೀನ್ಸ್ ಪ್ಯಾಂಟ್, ಶೂಗಳು ಮತ್ತು ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅ. 8ರಿಂದ 21ರ ನಡುವಿನ ಅವಧಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಒಟ್ಟು 5 ಮಂದಿ ಪ್ರಯಾಣಿಕರು ದುಬಾೖಯಿಂದ ಸಾಗಾಟ ಮಾಡುತ್ತಿದ್ದ 1.59 ಕೋ.ರೂ. ಮೌಲ್ಯದ ಹಾಗೂ ಅ. 6ರಂದು 38.53 ಲ.ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿತ್ತು.