ಕಾರ್ಕಳ, ನ 01(DaijiworldNews/MS): ಭಾರತವು 75 ವರ್ಷಗಳ ಅಮೃತ ಮಹೋತ್ಸವ ಈ ಶುಭ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಬೆಳಗಿಸುವ ಮೂಲಕ ಕನ್ನಡ ಬಾಷೆ, ಸಂಸ್ಕೃತಿ,ಕಲೆ, ಪರಂಪರೆ, ಸಾಮಾರಸ್ಯ ಸಂಗಮ ವಿಶ್ವದಲ್ಲಿ ಗುರುತಿಸುವಂತಾಗಲಿದೆ ಎಂದು ತಹಶೀಲ್ದಾರ್ ಪ್ರದೀಪ ಕುಡುರ್ರ್ಏಕರ್ ಹೇಳಿದರು.
ನಗರದ ಗಾಮಧಿ ಮೈದಾನದಲ್ಲಿ ಕನ್ನಡ ರಾಜೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜನನಿಯ ತನುಜಾತೆ ನಮ್ಮದು ರಾಜ್ಯವಾಘಿದ್ದು, ಅತ್ಯಂತ ಶ್ರೀಮಂತ ಪರಂಪರೆ, ವೀರರೂ, ಜ್ಞಾನಿಗಳೂ, ಆಡಳಿತ ಕುಶಲರೂ, ಪಂಡಿತ ಪಾಮರರು, ಕಲಾವಿದರಾದಿಯಾಗಿ ಹುಟ್ಟಿ ಬೆಳೆದು ಬೆಳಗಿದ ಧೀಮಂತ ನಾಡು. ಸ್ವಾತಂತ್ರ್ಯ ಚಳವಳಿ ಮತ್ತು ಏಕಿಕರಣ ಚಳುವಳಿಗಳು ಕರ್ನಾಟಕದಲ್ಲಿ ಜೊತೆ ಜೊತೆಯಾಗಿಯೇ ಬೆಳವಣಿಗೆಯಾಗಿತ್ತು, ಕನ್ನಡಿಗರ ಸ್ವಾಭಿಮಾನದ ಜಾಗೃತಿಯ ರಾಷ್ಟ್ರೀಯ ಜಾಗೃತಿಯಾಗಿತ್ತು, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯ ಗೋವಿಂದ ಪೈ ಪ್ರಾರ್ಥಿಸಿದರೆ, ಹುಯಿತಿಗೆಳ ನಾರಾಯಣರು ಕನ್ನಡ ನಾಡು ಉದಯವಾಗಲಿ ನಮ್ಮ ಚೆಲುವ - ಎಂಬುದಾಗಿ ಹಾರೈಸಿದ್ದರು. 1947ರ ಭಾರತ ಸ್ವತಂತ್ರವಾದ ಬಳಿಕ 5 ರಾಜ್ಯಗಳ ಆಳ್ವಿಕೆಗೆ ಒಳಪಟ್ಟಿದ್ದು, ಹೈದರಾಬಾದ್ ಸಂಸ್ಥಾನ ಭಾಷಾವಾರು ತತ್ವದ ಆಧಾರದ ಮೇಲೆ ಆಂಧ್ರಪ್ರದೇಶವಾಗಿ ಪುನರ್ ರಚನೆಯಾದ ಪ್ರೇರಣೆ ಪಡೆದ ಕರ್ನಾಟಕದಲ್ಲಿ ಎಸ್. ನಿಜಲಿಂಗಪ್ಪ ನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಗೊಂಡು ಕೊನೆಗೆ ಕೇಂದ್ರ ಸರಕಾರ 1952 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಗೆ ಫಜಲ್ ಆಲಿ ಆಯೋಗವನ್ನು ರಚಿಸಿತು. ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ನವಂಬರ್ 1, 1956 ರಂದು ವಿಶಾಲ ಮೈಸೂರು ರಾಜ್ಯ ರಚನೆಯಾಗಿ ಮುಂದೆ 1973 ರಲ್ಲಿ ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು ಎಂದರು.
1956ರಿಂದ ಇಂದಿನ ವರಗೆ ಸಂಸ್ಕೃತಿ,ಸಾಹಿತ್ಯ,ಶಿಕ್ಷಣ,ರಾಜಕೀಯ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿ, ನೀರಾಔರಿ, ಪ್ರವಾಸೋದ್ಯಮ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹತ್ವರವಾದ ಬದಲಾವಣೆಗಳಾಗಿವೆ. ಆಗುತ್ತಿದೆ. ಇನ್ನೂ ಮೂಂದೆಯೂ ಬೆಳೆವಣಿಗೆ ಸಾಗುತ್ತದೆ. ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳೂ ಸಂದಿವೆ. ಅಂತರಾಷ್ಟ್ರೀಯ ಖ್ಯಾತಿ ಪಡೆದು ಬೆಳಗಿದ ಹಲವು ಸಾಂಸ್ಕೃತಿಕ ಚೇತನಗಳು, ವೈಜ್ಞಾನಿಕ ವ್ಯಕ್ತಿತ್ವಗಳು ಕನ್ನಡದ ಪರಂಪರೆಯನ್ನು ಕಟ್ಟಿ ಬೆಳೆಸಿವೆ. ಕನ್ನಡದ ಬಗ್ಗೆ, ಕರ್ನಾಟಕದ ನಾಡು- ನುಡಿ, ಭಾಷೆ ಸಂಸ್ಕೃತಿಗಳನ್ನು ಪರಿಚಯಿಸಲು ಹಾಗೂ ಈ ಬಗ್ಗೆ ಜನರನ್ನು ಬಡಿದೆಬ್ಬಿಸಲು ಕರ್ನಾಟಕ ಸರ್ಕಾರವು ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದಡಿ ಹಿಂದಿನ ವರ್ಷ ಲಕ್ಷ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ. ಈ ವರ್ಷವು ಸಹ ಕೋಟಿ ಕಂಠ ಗಾಯನದಲ್ಲಿ ಕನ್ನಡಿಗರು ನೆಲ, ಜಲ ಮತ್ತು ಆಕಾಶದಲ್ಲಿ ಕನ್ನಡ ಹಾಡುಗಳನ್ನು ಹಾಡಿ ಕನ್ನಡವನ್ನು ಮುಗಿಲೆತ್ತರಕ್ಕೆ ಮತ್ತು ಆಕಾಶಕ ಪಸರಿಸುವಂತಹ ಸತ್ಕಾರ್ಯವನ್ನು ಮಾಡಲಾಗಿದೆ ಎಂದರು.
ರಾಷ್ಟ್ರಧ್ವಜಾರೋಹರಣದಲ್ಲಿ ಭಾರೀ ಎಡವಟ್ಟು!
ಪ್ರತಿವರ್ಷ ಇದೇ ಗಾಧಿ ಮೈದಾನದಲ್ಲಿ ಮೂರು ದಿನಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತಿರುತ್ತದೆ. ಪ್ರಸಕ್ತ ಬಾರಿ ಅದಕ್ಕಾಗಿ ಪೂರ್ವ ತಯಾರಿ ನಡೆಸದ ಫಲವಾಗಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾರೀ ಎರವಟ್ಟು ಆಗಿ ರಾಷ್ಟ್ರಪ್ರವೇಮಿಗಳಿಗೆ ಮುಜುಗರ ತಂದೊಟ್ಟುವಂತೆ ಮಾಡಿದೆ.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲು ಮುಂದಾಗಿ ರಾಷ್ಟ್ರಧ್ವಜ್ವಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಹಿಡಿದು ಎಳೆದ್ದರೂ ಕಟ್ಟಲಾದ ಹಗ್ಗ ಸಡಿಲಾಗದೇ ಕಗ್ಗಂಟಿನಲ್ಲಿ ಸಿಲುಕಿಕೊಂಡಿರುವುದರಿಂದ ಧ್ವಜಾರೋಹಣ ಮಾಡಲು ಸಾಧ್ಯವಾಗಿರಲಿಲ್ಲ. ಎರಡು ಬಾರಿ ರಾಷ್ಟ್ರಧ್ವಜವನ್ನು ಕೆಳಕ್ಕೆ ಇಳಿಸಿ ಸರಿಪಡಿಸಿದ ಮೇಲಕ್ಕೆ ಎಳೆದರೂ ಯಾವುದೇ ಪ್ರಯೋಜನಕ್ಕೆ ಬಾದರೇ ಮೂರನೇ ಬಾರಿ ಮತ್ತೇ ಸರಿಪಡಿಸುವ ಮೂಲಕ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಡಿವೈಎಸ್ಪಿ ವಿನಯಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮ ಕೇಶವ್ ಅವರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.ಗ್ರಾಮಾಂತರ ಠಾಣಾಧಿಕಾರಿ ತೇಜ್ವಸಿ ಅವರು ಕನ್ನಡದಲ್ಲಿಯೇ ನಿರ್ದೇಶನ ನೀಡುವ ಪಥಸಂಚಾಲನ ನೇತೃತ್ವ ವಹಿಸಿರುವುದು ಕನ್ನಡ ರಾಜೋತ್ಸವದ ವಿಶೇಷವಾಗಿತ್ತು.