ಮಂಗಳೂರು, ನ 01(DaijiworldNews/MS): ಕನ್ನಡ ರಾಜ್ಯೋತ್ಸವದಂದು ತುಳುನಾಡಿನಲ್ಲಿ ‘ಕರಾಳ ದಿನಾಚರಣೆ’ ಆಚರಿಸಲು ಕರೆಕೊಟ್ಟಿದ್ದಾರೆ. #ಬ್ಲ್ಯಾಕ್ ಡೇ ಫೋರ್ ತುಳುನಾಡು ಎಂಬ ಹ್ಯಾಷ್ ಟ್ಯಾಗ್ ಸದ್ಯ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಬ್ಲ್ಯಾಕ್ ಡೇ ಫೋರ್ ತುಳುನಾಡು ಎಂಬ ಹ್ಯಾಷ್ ಟ್ಯಾಗ್ ಬಹಳಷ್ಟು ಜನ ಟ್ವೀಟ್ ಮಾಡುತ್ತಿದ್ದು, ಕರ್ನಾಟಕದಲ್ಲಿ ತುಳುಭಾಷೆಯನ್ನು ಸರ್ಕಾರ ಅಧಿಕೃತ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನ.೧ ರಂದು ತುಳುನಾಡು 2 ಭಾಗವಾಗಿ ಕೇರಳ ಮತ್ತು ಕರ್ನಾಟಕದ ನಡುವೆ ಹಂಚಿಹೋಗಿತ್ತು. ಹೀಗಾಗಿ ಕರಾಳ ದಿನ ಆಚರಿಸುತ್ತಿದ್ದಾರೆ.
"ಅಖಂಡ ತುಳುನಾಡನ್ನು ಎರಡು ಭಾಗಗಳಾಗಿ ಬೇರ್ಪಡಿಸಿ ಒಂದು ಭಾಗ ಕೇರಳಕ್ಕೆ ಇನ್ನೊಂದು ಭಾಗ ಕರ್ನಾಟಕ ಕ್ಕೆ ಹಂಚಿ ತುಳುವರ 1956 ನ. 1ರಂದು ತುಳುನಾಡನ್ನು ತುಂಡರಿಸಿ ತುಳುವರ ಸ್ವತಂತ್ರ್ಯವನ್ನು ಕಸಿದುಕೊಂಡ ದಿನ. ತುಳುವರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡದೆ ತುಳುವರಿಗೆ ದ್ರೋಹ ಬಗೆದ ದಿನ" ಎಂದು ಟ್ವಿಟರ್ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ ಬಳಕೆದಾರರು "ಕರ್ನಾಟಕ ರಾಜ್ಯ ಸರಕಾರ ತುಳು ಭಾಷೆಯನ್ನು ಕರ್ನಾಟಕದಲ್ಲಿ ಅಧಿಕೃತ ಮಾಡದೇ ಇದ್ದರೆ ತುಳುವರು ಕರ್ನಾಟಕದಿಂದ ಪ್ರತ್ಯೇಕತೆ ಬಯಸುವುದರಲ್ಲಿ ಯಾವುದೇ ತಪ್ಪು ಇಲ್ಲ" ಎಂದು ಬರೆದುಕೊಂಡಿದ್ದಾರೆ.