ಮಣಿಪಾಲ, ನ 01(DaijiworldNews/MS): ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಸರಣಿ ಕಳ್ಳತನ ನಡೆದಿದ್ದು,ಆರು ಅಂಗಡಿಗಳ ಬೀಗ ಮುರಿದು , ಅಂಗಡಿಗಳಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದು ಇಂದು ಮುಂಜಾನೆ ಕೃತ್ಯ ಬೆಳಕಿಗೆ ಬಂದಿದೆ.
ಉಡುಪಿ ನಗರದ ಗುಂಡಿಬೈಲು ,ಮಣಿಪಾಲ ಠಾಣೆ ವ್ಯಾಪ್ತಿಯ ದೊಡ್ಡಣಗುಡ್ಡೆಯಲ್ಲಿ ಒಂದು ಬಟ್ಟೆ ಮಳಿಗೆ ಮತ್ತು ಮೂರು ಜನರಲ್ ಶಾಪ್ , ಉಡುಪಿ ನಗರ ಠಾಣೆ ವ್ಯಾಪ್ತಿಯ ಗುಂಡಿಬೈಲ್ ನಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದು ಸ್ಥಳಕ್ಕೆ ಉಡುಪಿ ಮತ್ತು ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.