ಉಡುಪಿ, ನ 01(DaijiworldNews/MS): ತಂಬಾಕು ನಿಯಂತ್ರಣ ತನಿಖಾ ದಳವು, ಮಣಿಪಾಲದ ಪೆರಂಪಳ್ಳಿ, ನಿಟ್ಟೂರು ಮತ್ತು ಕಕ್ಕುಂಜೆಯ ಭಾಗದ ಅಂಗಡಿಗಳು, ಹೋಟೆಲ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಅಡಿಯಲ್ಲಿ ದಾಳಿ ನಡೆಸಿ 48 ಪ್ರಕರಣ ದಾಖಲಿಸಿ, 5900 ರೂ.ದಂಡ ವಸೂಲಿ ಮಾಡಿದೆ.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಕ ದೇವಪ್ಪ ಪಟಗಾರ್ , ವಲಯ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಎಚ್.ಸಿ ನವೀನ್, ಪಿ.ಸಿ.ಸಲ್ಮಾನ್ ಹಾನ್, ಜಿಲ್ಲಾ ಆಸ್ಪತ್ರೆಯ ಮನೋಶಾಸ್ತ್ರಜ್ಞ ದಿನೇಶ್ಕುಮಾರ್ ಉಪಸ್ಥಿತರಿದ್ದರು.