ಬಂಟ್ವಾಳ, ಅ 31 (DaijiworldNews/SM): ನಾವೂರ ಗ್ರಾಮಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಬೆಂಬಲಿತರು ಹೊಂದಿದ್ದ ಭದ್ರಕೋಟೆಯನ್ನು ಒಡೆದು ಬಿಜೆಪಿ ಪ್ರವೇಶಿಸಿದಂತಾಗಿದೆ.
ಕಳೆದ 20 ವರ್ಷಗಳಿಂದ ದೇವಶ್ಯಪಡೂರು ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಯಾಗಿ ದಾಖಲೆ ಸೃಷ್ಟಿ ಸಿತ್ತು. ಈ ಬಾರಿ ಸಂಘಟಿತ ಹೋರಾಟದ ಫಲವಾಗಿ ನಾವೂರು ಗ್ರಾ.ಪಂ.ನ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಪ್ಪಿ ಅವರು 83 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಒಟ್ಟು 1070 ಮತಗಳು ಈ ವಾರ್ಡ್ ನಲ್ಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಪ್ಪಿ ಅವರಿಗೆ 475 ಮತಗಳು ಸಿಕ್ಕಿದರೆ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸುಮಿತ್ರಮೋಹನ್ ಅವರಿಗೆ 392 ಮತಗಳು ಲಭಿಸಿದೆ, 5 ಅಸಿಂಧು ಮತಗಳು ಚಲಾವಣೆ ಆಗಿವೆ. ಈ ಬಾರಿಯ ಉಪಚುನಾವಣೆಯಲ್ಲಿ ದಾಖಲೆಯ ಒಟ್ಟು 872 ಮತಗಳು ಚಲಾವಣೆ ಆಗಿದೆ.
ದೇವಶ್ಯಪಡೂರು ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜ್ಯೋತಿ ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರ ಉಪಸ್ಥಿತಿಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಅವರು ಚುನಾವಣಾ ಅಧಿಕಾರಿಯಾಗಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಧಾಮಣಿ ಸಹಾಯಕ ಚುನಾವಣಾ ಅಧಿಕಾರಿ ಯಾಗಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಿತು.