ಮಂಜೇಶ್ವರ, ಅ 31 (DaijiworldNews/MS): ತಲಪಾಡಿ ಟೋಲ್ ಗೇಟಿನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ತಲಪಾಡಿ ಗ್ರಾ. ಪಂ. ವ್ಯಾಪ್ತಿಯ ನಾಗರೀಕರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿರುವ ಟೋಲ್ ಅಧಿಕೃತರು ಕೇರಳದ 5 ಕಿಲೋ ಮೀಟರ್ ವ್ಯಾಪ್ತಿಗೆ ಸುಂಕವನ್ನು ವಿಧಿಸಿರುವ ತಾರತಮ್ಯದ ವಿರುದ್ಧ ನ್ಯಾಯಯುತವಾದ ಹೋರಾಟಕ್ಕೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಸಮಿತಿಗೆ ಚಾಲನೆ ದೊರಕಿದೆ.
ಕಾನೂನು ರೀತಿಯ ಹೋರಾಟಕ್ಕೆ ಚಾಲನೆಯನ್ನು ನೀಡಲಿರುವ ಹೋರಾಟ ಸಮಿತಿ ಮಂಜೇಶ್ವರದವರನ್ನು ಕಡೆಗಣಿಸಿದರೆ ಲೋಕೋಪಯೋಗಿ ಇಲಾಖೆಯಂದಿಗೆ ಚರ್ಚೆ ನಡೆಸಿ ಹಳೆಯ ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಸಂಚಾರಯೋಗ್ಯವನ್ನಾಗಿ ಮಾಡಿ ಮಂಜೇಶ್ವರ ಗ್ರಾ.ಪಂ. ನೇತೃತ್ವದಲ್ಲಿ ನೂತನ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಇದರ ಮೊದಲ ಹಂತವಾಗಿ ಪಂ. ಅಧ್ಯಕ್ಷರು, ಸದಸ್ಯರುಗಳು, ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಮಂಜೇಶ್ವರ ಪೀಪಲ್ಸ್ ಯೂನಿಯನ್ ನೇತಾರರು ಸರ್ವೀಸ್ ರಸ್ತೆ ನಿರ್ಮಿಸಬಹುದಾದ ತಲಪಾಡಿ ಮರಿಯಂ ಚರ್ಚ್ ಹಿಂಬಾಗದ ಹಳೆಯ ರಾ. ಹೆದ್ದಾರಿ ಇದ್ದ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಒಂದು ರಾಜ್ಯದ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿ ಮತ್ತೊಂದು ರಾಜ್ಯದ ಸ್ಥಳೀಯರನ್ನು ಕಡೆಗಣಿಸಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಲೇರಲು ಕೂಡಾ ಹೋರಾಟ ಸಮಿತಿಯಲ್ಲಿ ತೀರ್ಮಾನವಾಗಿದೆ.ತಲಪಾಡಿ ಟೋಲ್ ಗೇಟ್ ಹೋರಾಟ ಸಮಿತಿ ಮಂಜೇಶ್ವರ ಇದರ ರೂಪೀಕರಣ ಸಭೆಯು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೀನ್ ಲೆವಿನ ಮೊಂತೆರೊ ಅವರ ಅಧ್ಯಕ್ಷತೆಯಲ್ಲಿ ಕಲಾ ಸ್ಪರ್ಷಮ್ ನಲ್ಲಿ ಜರುಗಿತು
ಟೋಲ್ ಹೋರಾಟ ಸಮಿತಿ ಅಧ್ಯಕ್ಷರಾಗಿ ಜೀನ್ ಲವೀನಾ ಮೊಂತೇರೋ, ಪ್ರದಾನ ಸಂಚಾಲಕರಾಗಿ ವಾರ್ಡ್ ಸದಸ್ಯರಾದ ಅಬ್ದುಲ್ ರಹೀಮ್ ರವರನ್ನು ಆಯ್ಕೆ ಮಾಡಲಾಯ್ತು ರಕ್ಷಾಧಿಕಾರಿಗಳಾಗಿ. ಮಾಜಿ ಪಂ. ಅಧ್ಯಕ್ಷ ಯು ಎ ಕಾದರ್. ಬಶೀರ್ ಅಹ್ಮದ್ . ಮಜೀದ್ ಹಾಜಿ. ಸಂಜೀವ ಶೆಟ್ಟಿ. ಹಾಗೂ ಪಂಚಾಯತ್ ಸದಸ್ಯರಾದ ರಾದಕ್ಕ. ರವರನ್ನು ಆಯ್ಕೆ ಮಾಡಲಾಯಿತು
ಸಲಹೆಗಾರರಾಗಿ ಕೆ. ಆರ್ ಜಯಾನಂದ, ಹರಿಶ್ಚಂದ್ರ ಹೊಸಂಗಡಿ ಸಮಿತಿ ಕಾರ್ಯಕಾರಿ ಸದಸ್ಯರಾಗಿ ಜಬ್ಬಾರ್ ಬಹರೇನ್ ,ಹಸೈನಾರ್ ಸೆವೆನ್ ಸ್ಟಾರ್, ಲಕ್ಷ್ಮಣ ಕಣ್ವತೀರ್ಥ, ದಯಾಕರ ಮಾಡ, ಅಬ್ದುಲ್ ರಜಾಕ್ ಚಕ್ಕೂರು, ಸಂಜೀವ ಶೆಟ್ಟಿ, ಅಶ್ರಫ್ ಬಡಾಜೆ, ಅಶ್ರಫ್ ಕುಂಜತ್ತೂರು, ಮಜೀದ್ ಎಂ ಕೆ, ಅಶ್ರಫ್ ಮಜಲ್, ಹಮೀದ್ ಮಜಲ್ ,ಆಲಿಕುಟ್ಟಿ ನ್ಯಾಶನಲ್, ರಜಾಕ್ ಪೆಟ್ರೋಲ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.