ಕಾರ್ಕಳ,ಫೆ 19 (MSP): ನಕ್ಸಲ್ ಪೀಡಿತ ಪ್ರದೇಶಕ್ಕೊಳಪಟ್ಟ ಮಾಳ ರಸ್ತೆಯ ದುರವಸ್ಥೆಯ ಕುರಿತು ಸ್ಥಳೀಯ ನಾಗರಿಕರೊಬ್ಬರ ಮನವಿಗೆ ಪ್ರಧಾನ ಮಂತ್ರಿ ಕಚೇರಿ ಸ್ಪಂದಿಸಿದರೂ ಉಡುಪಿ ಜಿಲ್ಲಾ ಪಂಚಾಯತ್ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಸ್ಸೆ ಯಥಾಸ್ಥಿತಿಯಲ್ಲಿ ಮುಂದುವರಿದಿರುವ ಅಂಶ ಬೆಳಕಿಗೆ ಬಂದಿದೆ.
ಏನಿದು ಸಮಸ್ಯೆ?
ಪಶ್ಚಿಮ ಘಟ್ಟಲು ತಪ್ಪಲು ತೀರಾ ಪ್ರದೇಶವಾದ ಮಾಳ ಗ್ರಾಮವು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಇದೇ ಗ್ರಾಮದದಲ್ಲಿ ಹಾದು ಹೋಗಿರುವ ಜಿಲ್ಲಾ ಪಂಚಾಯತ್ನ ಅಧೀನಕ್ಕೊಳಪಟ್ಟ ಹಲವು ರಸ್ತೆಗಳು ಇನ್ನು ಅಭಿವೃದ್ಧಿ ಹೊಂದಿಲ್ಲ. ಅವುಗಳಲ್ಲಿ ಕೋಟೆಯಂಗಡಿಯಿಂದ ಕೋಡಿಬೆಟ್ಟು ವರೆಗಿನ ಒಂದುವರೆ ಕಿ.ಮೀ ಮಣ್ಣಿನ ರಸ್ತೆಯು ಒಂದಾಗಿದೆ.
ಈ ಕುರಿತು ಸ್ಥಳೀಯ ಗ್ರಾಮಸ್ಥರು ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ತಮ್ಮದೇ ರೀತಿಯಲ್ಲಿ ಹೋರಾಟದ ಹಾದಿಯಲ್ಲಿ ತೊಡಗಿಸಿಕೊಂಡಿದ್ದರು. ಜನಪ್ರತಿನಿಧಿಗಳಿಗೆ ಹಾಗೂ ವಿವಿಧ ಇಲಾಖಾಧಿಕಾರಿಗಳಿಗೆ ಗ್ರಾಮಸ್ಥರ ಸಹಿಯುಳ್ಳ ಮನವಿ ಪತ್ರಗಳನ್ನು ಸಲ್ಲಿಸಿ ಹೈರಾಣರಾಗಿದ್ದಾರೆ.
ಮಾಳ ಗ್ರಾಮದ ಅತೀ ಮುಖ್ಯ ಕೂಡು ಒಳ ಸಂಪರ್ಕ ರಸ್ತೆ ಇದಾಗಿದೆ. ಕುದುರೆಮುಖ ಹೆದ್ದಾರಿಗೆ ಸಂಪರ್ಕಿಸುವ, ಕೋಡಿಬೆಟ್ಟು, ಕೋಟೆಯಂಗಡಿ, ಚೌಕಿಯಂಗಡಿ, ಕೊಂಡಿಬೆಟ್ಟು, ಪುಂಜಾಜೆ, ನೂರಾಳ್ ಬೆಟ್ಟು ಹೊಸ್ಮಾರು ಸಂಪರ್ಕಿಸುವ ಒಳ ರಸ್ತೆಯು ಆಗಿದೆ. ಆ ಮೂಲಕ ದೂರದ ಪ್ರದೇಶಗಳಿಗೆ ಅತೀ ಕಡಿಮೆ ವೇಳೆಯಲ್ಲಿ ಕ್ರಮಿಸಲು ಸಾಧ್ಯವಾಗಿತ್ತದೆ.
ಮನಸ್ಸಿನದರೆ ಮಾರ್ಗವಿದೆ ಸಮಸ್ಯೆಗೆ ಪರಿಹಾರವಿದೆ!
ಮನಸ್ಸಿದರೆ ಮಾರ್ಗವಿದೆ. ಸಮಸ್ಸೆಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಅಚಲ ನಂಬಿಕೆಯೊಂದಿಗೆ ಸಾಮಾಜಿಕ ಕಾರ್ಯಕರ್ತ ಪೆರ್ಮುಡೆ ಗುತ್ತಿನ ಯಂ.ಕಿರಣ ಹೆಗ್ಡೆಯವರು2018 ಸಪ್ಪೆಂಬರ್ 27 ರಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಮನವಿಗೆ ಸ್ವಂದಿಸಿದ ಪ್ರಧಾನ ಮಂತ್ರಿ ಕಚೇರಿಯಿಂದ 2018 ಅಕ್ಟೋಬರ್ 6ರಂದು ಮರು ಉತ್ತರ ಲಭಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ಪತ್ರ ಕಳುಹಿಸಲಾಗಿದೆ ಎಂಬ ವಿಚಾರ ಆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. 2018 ನವಂಬರ್ 27ರಂದು ಉಡುಪಿ ಜಿಲ್ಲಾ ಪಂಚಾಯತ್ನ ಪತ್ರವೊಂದು ಕಿರಣ್ ಹೆಗ್ಡೆಯವರ ಕೈಸೇರಿದೆ. ಪ್ರಧಾನ ಮಂತ್ರಿಯವರ ಇ-ಸ್ಪಂದನದಲ್ಲಿ ಸ್ವೀಕೃತವಾದ ಮನವಿಯ ಕುರಿತು ಸ್ಥಳ ಪರಿಶೀಲನೆ ನಡೆಸಿ ನಿಯಾಮಾನುಸಾರ ಸೂಕ್ತ ಕ್ರಮಗೊಳ್ಳಲಾಗುವುದೆಂದು ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭರವಸೆ ನೀಡಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಕಡತದಲ್ಲಿ ಮಾತ್ರ ಕ್ರಮ ಕೈಗೊಂಡಿರುವುದರಿಂದ ಸಮಸ್ಸೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ರಸ್ತೆ ಅಭಿವೃದ್ಧಿಗೆ ಉಡುಪಿ ಜಿಲ್ಲಾ ಪಂಚಾಯತ್ ಇನ್ನೂ ಮುಂದಾಗದೇ ಹೋದಲ್ಲಿ ಮತ್ತೇ ಪ್ರಧಾನ ಮಂತ್ರಿ ಕಚೇರಿಯ ಮೋರೆ ಹೋಗುತ್ತೇನೆ.-ಯಂ.ಕಿರಣ್ ಹೆಗ್ಡೆ
ವರದಿ:ಆರ್.ಬಿ.ಜಗದೀಶ್