ಉಡುಪಿ, ಅ 30 (DaijiworldNews/HR): ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ನಗರ ಸಭೆ ಸದಸ್ಯೆ ಸೆಲೀನ್ ಕರ್ಕಡಾ ಅವರು ಅಕ್ಟೋಬರ್ 29 ರಂದು ನಿಧನರಾಗಿದ್ದಾರೆ.
ಪ್ರಸ್ತುತ ಮೂಡು ಪೆರಂಪಳ್ಳಿ ವಾರ್ಡ್ನ ಚುನಾಯಿತ ಪ್ರತಿನಿಧಿಯಾಗಿದ್ದ ಸೆಲೀನ್, 2013-14ರ ಅವಧಿಯಲ್ಲಿ ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇನ್ನು ಸೆಲೀನ್ ಕರ್ಕಡಾ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ಮಹಿಳಾ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.