ಬಂಟ್ವಾಳ, ಅ 29 (DaijiowrldNews/HR): ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಅಳಿಕೆ ಎಂಬಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಪಡಿಬಾಗಿಲು ನಿವಾಸಿ ಬಾಲು ಪೂಜಾರಿ ( 60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇವರಿಗೆ ವಿಪರೀತ ಕುಡಿತದ ಚಟ ಇತ್ತು ಎನ್ನಲಾಗಿದ್ದು, ಮನೆಯ ಸಮೀಪದ ಗುಡ್ಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೂರು ವರ್ಷದ ಹಿಂದೆ ಇವರು ವಿಷ ಪದಾರ್ಥ ಪೆರಢಾನ್ ಸೇವಿಸಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು ಎನ್ನಲಾಗಿದೆ .