ಕಾಸರಗೋಡು, ಅ 29 (DaijiowrldNews/HR): ಕೇರಳ ತುಳು ಅಕಾಡೆಮಿಯ ಹೊಸ ಆಡಳಿತ ಮಂಡಳಿ ಪದಗ್ರಹಣ ನ.1ರಂದು ಹೊಸಂಗಡಿಯ ದುರ್ಗಿಪಳ್ಳದ ತುಳುಭವನದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿಯುಕ್ತ ಅಧ್ಯಕ್ಷ ಕೆ.ಆರ್.ಜಯಾನಂದ ಈ ವಿಷಯ ತಿಳಿಸಿದ್ದು, ನ.1ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭವನ್ನು ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು. ನಿಯುಕ್ತ ಅಧ್ಯಕ್ಷ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಬಿ.ಪ್ರದೀಪ್ ಕುಮಾರ್ ದಾಖಲೆ ಹಸ್ತಾಂತರಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಉದುಮಾ ಶಾಸಕ ಸಿ.ಎಚ್. ಕುಂಞಂಬು, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಬ್ಲೋಕ್ ಪಂಚಾಯತ್ ಸದಸ್ಯೆ ಸಮೀರಾ, ಮಾಜಿ ಸಂಸದ ಪಿ.ಕರುಣಾಕರನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ., ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ ಪಜ್ಜ, ಮೀಂಜ ಪಂಚಾಯತ್ ಸದಸ್ಯೆ ರೇಖಾ ಶರತ್, ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬಿ.ವಿ.ರಾಜನ್, ಕೆ.ಎಸ್.ಫಕ್ರುದ್ದೀನ್, ಟಿ.ಎ.ಮೂಸಾ, ಹರ್ಷಾದ್ ವರ್ಕಾಡಿ, ವಕೀಲ ಬಾಲಕೃಷ್ಣ ಶೆಟ್ಟಿ, ರಾಘವ ಚೇರಾಲ್, ಅಹಮ್ಮದಾಲಿ ಮೊಗ್ರಾಲ್, ಹಮೀದ್ ಪೆರಿಂಗಡಿ ಉಪಸ್ಥಿತರಿರುವರು ಎಂದರು.
ಇನ್ನು ತಮ್ಮ ನೇತೃತ್ವದ ಸಮಿತಿ ನಡೆಸಿದ ಈ ವರೆಗಿನ ಚಟುವಟಿಕೆ ತೃಪ್ತಿತಂದಿದೆ ಎಂದು ಹಾಲಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಭಿಪ್ರಾಯಪಟ್ಟರು.
ಪದಗ್ರಹಣ ಮಾಡಿದ ಕೊಂಚ ಅವಧಿಯಲ್ಲೇ ದುರ್ಗಿಪಳ್ಳದಲ್ಲಿ ಶಂಕುಸ್ಥಾಪನೆಗೊಂಡು ಒಂದೇ ವರ್ಷದ ಅವಧಿಯಲ್ಲಿ ತುಳುಭವನ ನಿರ್ಮಾಣಗೊಂಡಿತ್ತು. ತುಳು ಜಾತ್ರೆ ಸಹಿತ ತುಳು ಭಾಷೆ-ಸಂಸ್ಕೃತಿಯ ಉಳಿಕೆಗೆ ನಾನಾ ವಿಧಧ ಯತ್ನ ನಡೆಸಲಾಗಿದ್ದು, ಯಶಸ್ವಿಯಾಗಿದೆ. ನಿಯುಕ್ತ ಸಮಿತಿಯೂ ಈ ನಿಟ್ಟಿನಲ್ಲಿ ತುಂಬ ಕೊಡುಗೆ ನೀಡುವ ನಿರೀಕ್ಷೆಯಿದೆ. ಈ ವರೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ನಿಯುಕ್ತ ಕಾರ್ಯದರ್ಶಿ ರವೀಂದ್ರ ಎ., ಸದಸ್ಯರಾದ ಜೋಸೆಫ್ ಕ್ರಾಸ್ತಾ, ಅಜಿತ್ ಎಂ.ಸಿ.ಲಾಲ್ ಭಾಗ್ ಇದ್ದರು.