ಮಂಗಳೂರು, ಅ 29 (DaijiowrldNews/HR): ಖ್ಯಾತ ಸುದ್ದಿ ವಾಹಿನಿ ನ್ಯೂಸ್ 18 ಕನ್ನಡ ವತಿಯಿಂದ 'ಕರಾವಳಿ ಸಮುದಾಯ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದಿದ್ದು, ಈ ವೇಳೆ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆಯವರಿಗೆ 'ಕರಾವಳಿ ಸಮುದಾಯ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಪಾದಕ ನಿಖಿಲ್ ಜೋಶಿ ನೇತೃತ್ವದ ನ್ಯೂಸ್ 18 ಕನ್ನಡ ಸಂಪಾದಕೀಯ ಮಂಡಳಿಯಿಂದ ಕರಾವಳಿ ಭಾಗದ 18 ಸಾಧಕರನ್ನು ಗುರುತಿಸಲಾಯಿತು.
ಹರ್ಷ ವ್ಯಕ್ತಪಡಿಸಿದ ವಾಲ್ಟರ್ ನಂದಳಿಕೆ, ಡೈಜಿವರ್ಲ್ಡ್ ಮಾಧ್ಯಮ ಅಸ್ತಿತ್ವಕ್ಕೆ ಬಂದು 22 ವರ್ಷಗಳಾಗಿವೆ. ಭಾರತ ಮತ್ತು ವಿದೇಶಗಳಲ್ಲಿ ಅನೇಕ ಸಂಸ್ಥೆಗಳು ನನ್ನನ್ನು ಅಭಿನಂದಿಸುತ್ತಿವೆ, ಆದರೆ ಮಾಧ್ಯಮ ಸಂಸ್ಥೆಯು ಮೊದಲ ಬಾರಿಗೆ ಮಾಧ್ಯಮ ಸಂಸ್ಥೆಯ ಮತ್ತೊಬ್ಬ ವ್ಯಕ್ತಿಯನ್ನು ಸನ್ಮಾನಿಸಿದೆ. ಪ್ರಶಸ್ತಿ ನೀಡಿದ ನ್ಯೂಸ್ 18 ಕನ್ನಡಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇದೇ ವೇಳೆ ಕರಾವಳಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಮಾನಾಥ ರೈ, ನಟ ಡಾ.ಸುಮನ್ ತಲ್ವಾರ್, ನ್ಯೂಸ್18ನ ಡಿ.ಪಿ.ಸತೀಶ್, ಉಲ್ಲಾಸ್ ಅಗರಬತ್ತಿಯ ನಿಖಿಲ್ ಎಸ್.ಪಾಟೀಲ್, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶಾಸಕ ಡಾ.ಭರತ್ ಶೆಟ್ಟಿ, ನಟಿ ಮಾನಸಿ ಸುಧೀರ್, ನಿರ್ದೇಶಕ ಅನುಪ್ ಭಂಡಾರಿ, ಶಾಸಕ ಅಂಗಾರ, ಅಮೃತ್ ನೋನಿಯಿಂದ ಶ್ರೀನಿವಾಸ್ ಮೂರ್ತಿ, ಶಾಸಕ ಯುಟಿ ಖಾದರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ, ಡಾ ಅನೀಶ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ನಟ ಪ್ರಥ್ವಿ ಅಂಬಾರ್, ನ್ಯೂಸ್18 ಕನ್ನಡದ ಉಪಾಧ್ಯಕ್ಷೆ ಸರಸ್ವತಿ, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ರವೀಂದ್ರ ಶೇಟ್, ಪೈ ಇಂಟರ್ನ್ಯಾಶನಲ್ನ ಶರತ್ಕುಮಾರ್ ಮತ್ತು ಐಡಿಯಲ್ ಐಸ್ಕ್ರೀಮ್ಸ್ನ ಮುಕುಂದ್ ಕಾಮತ್ ಉಪಸ್ಥಿತರಿದ್ದರು.
ಶರ್ಮಿತಾ ಶೆಟ್ಟಿ ಮತ್ತು ನವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ಪಟ್ಟಿ:
ಅಕ್ಷರ ರತ್ನ - ಹರೇಕಳ ಹಾಜಬ್ಬ (ಉಲ್ಲಾಸ್ ಅಗರಬತ್ತಿ ವತಿಯಿಂದ 51,000 ರೂ. ಚೆಕ್)
ಜೀವಮಾನ ಸಾಧನೆ ಪ್ರಶಸ್ತಿ - ಎನ್ ವಿನಯ ಹೆಗ್ಡೆ
ಜ್ಞಾನ ರತ್ನ - ಡಾ ಮೋಹನ ಆಳ್ವ
ಸಾಹಸ ರತ್ನ - ಗಂಗಾಧರ ಕಡೆಕಾರ್
ಸಾಹಿತ್ಯ ರತ್ನ - ವೈದೇಹಿ
ಉದ್ಯಮ ರತ್ನ - ವಿಟ್ಠಲ ಹೆಗ್ಡೆ
ಸಂಶೋಧನ ರತ್ನ -ಬಾಬು ಪಂಗಲ
ಜನಪದ ರತ್ನ - ಬನ್ನಂಜೆ ಬಾಬು ಅಮೀನ್
ಕಂಬಳ ರತ್ನ - ಸುರೇಶ್ ಶೆಟ್ಟಿ (ಉಲ್ಲಾಸ್ ಅಗರಬತ್ತಿ ವತಿಯಿಂದ 51,000 ರೂ. ಚೆಕ್)
ಕಲಾ ರತ್ನ - ಭಾಸ್ಕರ ಕೊಗ್ಗ ಕಾಮತ್
ಸಿನಿ ರತ್ನ ಪ್ರಶಸ್ತಿ - ರಿಷಬ್ ಶೆಟ್ಟಿ
ಸಮಾಜ ರತ್ನ - ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ,
ಸಮುದಾಯ ರತ್ನ -ವಾಲ್ಟರ್ ನಂದಳಿಕೆ
ಯೋಗ ರತ್ನ - ತನುಶ್ರೀ ಪಿತ್ರೋಡಿ