ಮಂಗಳೂರು, ಅ 27 (DaijiworldNews/HR): ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸರಕಾರವು ನಗರದಲ್ಲಿನ ಮೂರು ಕಸಾಯಿಖಾನೆಗಳನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಂಡಿದೆ.
ಜಾನುವಾರು ಸಂರಕ್ಷಣಾ ಕಾಯ್ದೆ 2020, ಕಾಯ್ದೆ 8 (4)ರ ಅಡಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಕಾಟಿಪಳ್ಳ, ಅರ್ಕುಳ, ಗಂಜಿಮಠದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮೂರು ಕಸಾಯಿಖಾನೆಗಳನ್ನು ಕಂದಾಯ ಇಲಾಖೆ ವಶಪಡಿಸಿಕೊಂಡಿದೆ. .
ಶಾಸಕ ಭರತ್ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಸಹಾಯಕ ಆಯುಕ್ತ ಮೋಹನ್ ಮೋಹನ್ ಕಸಾಯಿಖಾನೆಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸುವ ಮುನ್ನವೇ ಸ್ಥಳ ಹಾಗೂ ಮಾಲನ್ನು ವಶಕ್ಕೆ ಪಡೆದಿದ್ದಾರೆ. ಭೂ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಜ್ಪೆ, ಸುರತ್ಕಲ್ ಮತ್ತು ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳು ಇದ್ದು, ಗಂಜಿಮಠದ ಕಸಾಯಿಖಾನೆ ಯೂಸುಫ್ ಅವರದ್ದಾಗಿದ್ದರೆ, ಬಾತೀಶ್ ಅವರು ಆರ್ಕುಳ ಕಸಾಯಿಖಾನೆ ಮತ್ತು ಹಕೀಮ್ ಕಾಟಿಪಳ್ಳದಲ್ಲಿ ಕಸಾಯಿಖಾನೆ ಹೊಂದಿದ್ದಾರೆ.