ಮಂಗಳೂರು, ಅ 27 (DaijiworldNews/HR): ಖ್ಯಾತ ಚಿತ್ರಕಲಾವಿದ ಬಿ.ಜಿ.ಮಹಮ್ಮದ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಅ.28, 29 ಮತ್ತು 30ರಂದು ನಗರದ ಕುದುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಅ.28ರಂದು ಸಂಜೆ 5ಕ್ಕೆ ಜನ್ಮ ಶತಮಾನೋತ್ಸವ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.
ನೂರರ ನೆನಪಿನ ಸ್ಮರಣ ಸಂಚಿಕೆಯನ್ನು ಸಂಸದ ನಳಿನ್ಕುಮಾರ್ ಕಟೀಲು ಬಿಡುಗಡೆಗೊಳಿಸಲಿದ್ದು, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯ.ಟಿ. ಖಾದರ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಗಣೇಶ್ ಸೋಮಯಾಜಿ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ. .29ರಂದು ಬೆಳಗ್ಗೆ 10.30ಕ್ಕೆ 10ವರ್ಷದ ಒಳಗಿನ ಮಕ್ಕಳ ಚಿತ್ರಕಲಾಸ್ಪರ್ಧೆಯನ್ನು ಆರ್ಟಿಸ್ಟ್ ಕಂಬೈನ್ ಸಂಸ್ಥೆಯ ಅಧ್ಯಕ್ಷ ಟ್ರವರ್ ಪಿಂಟೊ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಕಾಸರಗೋಡಿನ ಖ್ಯಾತ ಕಲಾವಿದ ಪಿ.ಎಸ್.ಪುಂಚಿತ್ತಾಯ ಅವರಿಂದ ಚಿತ್ರಕಲಾ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳಿಕ ಡಾ.ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತು ಡಾ.ಸುಯಜ್ಞ ಜೋಶಿ ಭಾಗವಹಿಸುವರು ಎಂದರು.
ಅ.30ರಂದು ಬೆಳಗ್ಗೆ 10ರಿಂದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಆಶು ಆಯ್ಕೆಯಾದ ಕಲಾವಿದರಿಂದ ಚಿತ್ರರಚನೆ ನಡೆಯಲಿದೆ. ಸಂಜೆ 4ಗಂಟೆಗೆ ಬಿಜಿಎಂ ಅವರ ಹಿರಿಯ ಪುತ್ರ ಶಬೀರ್ ಅಲಿ ಚಿತ್ರಕಲಾ ಪ್ರಾತ್ಯಕ್ಷಿಕೆ ನೀಡುವರು. ಸಂಜೆ ಸಮಾರೋಪ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ಎಂ.ಡಿ. ಹಾಗೂ ಸಿ.ಇ.ಒ ಮಹಾಬಲೇಶ್ವರ ಎಂ.ಎಸ್. ಸಮಾರೋಪ ಭಾಷಣ ಮಾಡಲಿದ್ದಾರೆ.
ಶಾಸಕ ಡಾ.ಭರತ್ ಶೆಟ್ಟಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಭಾರತಿ ಶೆಟ್ಟಿ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಕಿರಿಯ ವೃತ್ತಿಪರ ಸಾಧಕ ಚಿತ್ರಕಲಾವಿದರಿಗೆ ಈ ವೇಳೆ ಸನ್ಮಾನ ನೆರವೇರಲಿದೆ ಎಂದು ತಿಳಿಸಿದರು.